Breaking NewsLatestಕಲಬುರ್ಗಿಜಿಲ್ಲಾ ಸುದ್ದಿ
ಯುವಕನ ಹತ್ಯೆ: ಸೊಂಟದಲ್ಲೇ ಚಾಕುಬಿಟ್ಟು ಪರಾರಿಯಾದ ಹಂತಕರು!

ಕಲಬುರಗಿ: ನಗರದಲ್ಲಿ ಮತ್ತೊಂದು ಕೊಲೆ ನಡೆದಿದೆ. ಚಾಕುವಿನಿಂದ ಇರಿದು ಯುವಕನ ಬರ್ಬರ ಹತ್ಯೆಗೈದ ಘಟನೆ ಎಂಎಸ್ಕೆ ಮಿಲ್ ಬಳಿ ನಡೆದಿದೆ.
ಸೋಹೆಲ್ (21) ಕೊಲೆಯದ ಯುವಕ. ಸೋಹೆಲ್ ಬೆನ್ನಿಗೆ ಮತ್ತು ಎದೆಗೆ ಚಾಕುವಿನಿಂದ ಇರಿಯಲಾಗಿದೆ. ಕೊಲೆಯ ಬಳಿಕ ಸೊಂಟದಲ್ಲೇ ಚಾಕು ಬಿಟ್ಟು ಹಂತಕರು ಪರಾರಿಯಾಗಿದ್ದಾರೆ.
ಯುವತಿಯ ವಿಚಾರಕ್ಕೆ ಗಲಾಟೆಯಾಗಿ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ನ್ಯೂ ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆಗಡುಕರ ಬಂಧನಕ್ಕೆ ಜಾಲ ಬೀಸಿದ್ದಾರೆ. ಹಂತಕರ ಪತ್ತೆ ನಂತರವಷ್ಟೆ ಕೊಲೆಗೆ ನಿಖರ ಕಾರಣ ತಿಳಿದುಬರಬೇಕಿದೆ.
