Breaking NewsLatestರಾಜ್ಯಸುದ್ದಿ

ಬೆಂಗಳೂರಿನ ಹಲವೆಡೆ ಇಂದು ಕೈಕೊಡಲಿದೆ ವಿದ್ಯುತ್!

ಬೆಂಗಳೂರು: ಸುಡು ಬಿಸಿಲಿನಿಂದ ಬೆಂದು ಹೋಗುತ್ತಿರುವ ಸಿಲಿಕಾನ್ ಸಿಟಿ ಮಂದಿಗೆ ಬೆಸ್ಕಾಂ ಮತ್ತಷ್ಟು ಬಿಸಿ ನೀಡಲು ಮುಂದಾಗಿದೆ. ನಗರದ ಹಲವೆಡೆ ಕಾಮಗಾರಿಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಹಲವು ಕಡೆಗಳಲ್ಲಿ ಇಂದು ವಿದ್ಯುತ್ ಸಮಸ್ಯೆಯಾಗಲಿದೆ.

ಇಂದು ಬೆಳಗ್ಗೆ 10 ರಿಂದ ಸಂಜೆ 7 ಗಂಟೆಯವರೆಗೆ ಹಕ್ಕಿನಾಲು, ಕೂಡ್ಲೂರು, ಗುಡೇಮಾರನಹಳ್ಳಿ, ಉದ್ದಂಡಹಳ್ಳಿ, ಗೋವಿಂದಪುರ, ರಶಾದ್ ನಗರ, ಅರೇಬಿಕ್ ಕಾಲೇಜು, ಎಂ ಎಸ್ ರಾಮಯ್ಯ ಉತ್ತರ ನಗರ, ಜೋಗುಪಾಳ್ಯ, ಮುಖ್ಯ ಚಾನಲ್ ರಸ್ತೆ, ಇಲ್ಪೆ ತೋಪು, ಕೇಂಬ್ರಿಡ್ಜ್ ಲೇಔಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಬೆಳಗ್ಗೆ 9ರಿಂದ ಸಂಜೆ 8 ಗಂಟೆಯವರೆಗೆ ಕೆ.ಜಿ.ಪುರ ಮುಖ್ಯರಸ್ತೆ, ಬಿಇಎಲ್ ಒಂದು ಮತ್ತು  ಎರಡನೇ ಹಂತ, ಗಾಂಧಿಪಾರ್ಕ್, ಬ್ಲಾಕ್ ರಾಬಿನ್ ಥಿಯೇಟರ್, ರಾಬಿನ್ ಥಿಯೇಟರ್ ಸರ್ಕಲ್, ರೈಲ್ವೇ ಸ್ಟೇಷನ್ ರೋಡ್, ವಿದ್ಯಾಪೀಠ ರಸ್ತೆ, ಬಿಜಿಎಸ್ ಆಸ್ಪತ್ರೆ ರಸ್ತೆ, ಮೈಸೂರು ಹೈವೇ, ದೊಡ್ಡಬಳ್ಳಿ ರಸ್ತೆ, ಗುಡ್ ಡಾರ್ಟ್ ರಸ್ತೆ, ಸೀತಾ ವೃತ್ತ ಮ್ಯಾಕ್ಸ್ ಮುಲ್ಲಾರ್ ಶಾಲೆಯ ಹತ್ತಿರ, ಆಲದ ಮರದ ಬಳಿ, ಜೈನ ಮಂದಿರದ ಹತ್ತಿರ, ಮ್ಯಾಕ್ಸ್ ಮುಲ್ಲಾರ್ ಶಾಲೆ, ವೆಂಕಟೇಶ್ವರ ಲೇಔಟ್ ಹತ್ತಿರ ಸೇರಿದಂತೆ ಅನೇಕ ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಾಸವಾಗಲಿದೆ.

ಉತ್ತರ ವಲಯದಲ್ಲಿ ಬೆಳಗ್ಗೆ10 ರಿಂದ ಸಂಜೆ 7 ಗಂಟೆಯವರೆಗೆ ವಿದ್ಯುತ್ ಸಮಸ್ಯೆ ಕಾಣಿಸಿಕೊಳ್ಳಲಿದೆ. ಬಂಗಯ್ಯ ಗಾರ್ಡನ್, ಎ.ಟಿ. ಹಳ್ಳಿ, ಲ್ಯಾಂಗ್ಫೋರ್ಡ್ ಉದ್ಯಾನ , ಶೆಟಿಹಳ್ಳಿ, ಮಲ್ಲಸಂದ್ರ, ಮಾರಿಗೋಲ್ಡ್ ಅಪಾರ್ಟ್ಮೆಂಟ್ ” ಸಪ್ತಗಿರಿ ಕಾಲೇಜು” ನಿರಂತರ ಬಡಾವಣೆ, ಸಾತನೂರು ಗ್ರಾಮ, ಚೋಳನಗರ, ಆನಂದನಗರ ಒಂದನೇ ಬ್ಲಾಕ್, ಗುಂಡಪ್ಪ ರೆಡ್ಡಿ ಲೇಔಟ್, ವಿ.ನಾಗೇನಹಳ್ಳಿ ಮುಖ್ಯ ರಸ್ತೆ, ಗುಡ್ಡದಹಳ್ಳಿ ಸೇರಿದಂತೆ ಕೆಲವು ಕಡೆಗಳಲ್ಲಿ ವಿದ್ಯುತ್ ಸಮಸ್ಯೆ ಕಾಣಿಸಿಕೊಳ್ಳಲಿದೆ.

Spread the love

Related Articles

Leave a Reply

Your email address will not be published. Required fields are marked *

Back to top button