ಕಪಾಳಮೋಕ್ಷ ಪ್ರಕರಣಕ್ಕೆ ಪರಸ್ಪರ ಕ್ಷಮೆ ಕೇಳಿದ ರಾಕ್ ಹಾಗೂ ಸ್ಮಿತ್

ವಾಷಿಂಗ್ಟನ್ (ಯುಎಸ್): ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು ಎಂಬ ಗಾದೆ ಕ್ರಿಸ್ ರಾಕ್ ವಿಷಯದಲ್ಲಿ ಸರಿಯಾಗಿ ಅನ್ವಯಿಸುತ್ತದೆ. 94ನೇ ಅಕಾಡೆಮಿ ಪ್ರಶಸ್ತಿ ಸಮಾರಂಭದಲ್ಲಿ ವಿಲ್ ಸ್ಮಿತ್ ಕಪಾಳಮೋಕ್ಷ ಮಾಡಿದ ಬಗ್ಗೆ ಹಾಸ್ಯನಟ ಕ್ರಿಸ್ ರಾಕ್ ಕೊನೆಗೂ ಮೌನ ಮುರಿದಿದ್ದಾರೆ.
ಬುಧುವಾರ ಬೋಸ್ಟನ್ನಲ್ಲಿ ಸ್ಟ್ಯಾಂಡ್-ಅಪ್ ಪ್ರದರ್ಶನದ ಸಂದರ್ಭದಲ್ಲಿ, ರಾಕ್ ಎರಡು ನಿಮಿಷಗಳ ಕಾಲ ನಡೆದ ಎರಡು ಅಬ್ಬರದ ಸ್ತಬ್ದಚಿತ್ರಗಳ ನಂತರ ಅಲ್ಲಿಂದ ಹೊರನಡೆದರು ಎಂದು ಹಾಲಿವುಡ್ನಿಂದ ವರದಿಯಾಗಿದೆ. 57 ವರ್ಷದ ರಾಕ್ ತಮ್ಮ ಎಂದಿನ ತಮಾಷೆಯೊಂದಿಗೆ ನಿಮ್ಮ ವಾರಾಂತ್ಯ ಹೇಗಿತ್ತು ಎಂದು ಕೇಳಿದ್ದಕ್ಕೆ, ರಾಕ್ ಆಸ್ಕರ್ ಸಮಾರಂಭವನ್ನಾಗಲಿ, ವಿಲ್ ಸ್ಮಿತ್ಅನ್ನಾಗಲಿ ನೇರವಾಗಿ ಉಲ್ಲೇಖಿಸದೆ ಏನಾಯಿತು ಎಂಬುದರ ಕುರಿತು ಸಂಕ್ಷಿಪ್ತವಾಗಿ ಹೇಳಿದರು.

“ಏನಾಯಿತು ಎಂಬುದರ ಬಗ್ಗೆ ನನ್ನ ಬಳಿ ಏನೂ ಇಲ್ಲ. ಆದ್ದರಿಂದ ನೀವು ಅದನ್ನು ಕೇಳಲು ಬಂದರೆ, ಈ ವಾರಾಂತ್ಯದ ಮೊದಲು ನಾನು ಬರೆದ ಸಂಪೂರ್ಣ ಕಾರ್ಯಕ್ರಮವನ್ನು ನಾನು ಹೊಂದಿದ್ದೇನೆ ಮತ್ತು ಏನಾಯಿತು ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ನಾನು ಆ ಕೆಟ್ಟ ಘಳಿಗೆಯ ಬಗ್ಗೆ ಮಾತಾಡುತ್ತೇನೆ ಮತ್ತು ಗಂಭೀರವಾಗಿರುವುದರ ಜೊತೆಗೆ ತಮಾಷೆಯಾಗಿಯೂ ಇರುತ್ತದೆ” ಎಂದು ಹೇಳಿದ್ದಾರೆ. ದಿ ಹಾಲಿವುಡ್ ಪ್ರಕಾರ ಸುಮಾರು ಒಂದು ಗಂಟೆ ನಡೆದ ಕಾರ್ಯಕ್ರಮದಲ್ಲಿ ಹಾಸ್ಯನಟ ರಾಕ್ ತಮ್ಮ ಎಂದಿನ ಹಾಸ್ಯದೊಂದಿಗೆ ಮಿಂಚಿದರು.

“ಕ್ರಿಸ್, ನಾನು ನಿಮ್ಮಲ್ಲಿ ಸಾರ್ವಜನಿಕವಾಗಿ ಕ್ಷಮೆಯಾಚಿಸಲು ಬಯಸುತ್ತೇನೆ. ನನ್ನಿಂದ ತಪ್ಪಾಗಿದೆ, ನಾನು ಮುಜುಗರಕ್ಕೊಳಗಾಗಿದ್ದೇನೆ. ಪ್ರೀತಿಯ ಜಗತ್ತಿನಲ್ಲಿ ಹಿಂಸೆಗೆ ಸ್ಥಾನವಿಲ್ಲ. ದಯೆಯಿರಲಿ” ಎಂದು ಸ್ಮಿತ್ ಕೂಡ ತಾವು ಕಪಾಳಮೋಕ್ಷ ಮಾಡಿದ್ದು ತಪ್ಪಾಯಿತು ಎಂದು ಇನ್ಸ್ಟಾಗ್ರಾಂನಲ್ಲಿ ಬರೆದಿದ್ದಾರೆ.
ಆಸ್ಕರ್ ಸಮಾರಂಭದಲ್ಲಿ ರಾಕ್ ಸ್ಮಿತ್ ಅವರ ಪತ್ನಿ ಜಡಾ ಪಿಂಕೆಟ್ ತಲೆ ಬೋಳಿಸಿಕೊಂಡಿದ್ದರ ಬಗ್ಗೆ ರಾಕ್ ಹಾಸ್ಯ ಮಾಡಿದ್ದರು. ಆಗ ಈ ಘಟನೆ ಸಂಭವಿಸಿತ್ತು. ಇಬ್ಬರೂ ನಟರು ಇದೀಗ ತಮ್ಮ ತಮ್ಮ ತಪ್ಪನ್ನು ಅರ್ಥಮಾಡಿಕೊಂಡಿರುವುದರಿಂದ ಮುಂದಿನ ದಿನಗಳಲ್ಲಿ ಅವರ ಸಂಬಂಧವು ಮೊದಲಿನಂತಾಗಲಿದೆ ಎಂದು ಭಾವಿಸಬಹುದು.




