Breaking NewsLatestರಾಜ್ಯಸುದ್ದಿ
ವಿದ್ಯಾರ್ಥಿ ವೇತನಕ್ಕೆ 100 ಕೋಟಿ; ಭರವಸೆ ನೀಡಿದ ಸಿಎಂ

ವಿವಿಧ ಸಮುದಾಯಗಳ ವಿದ್ಯಾರ್ಥಿಗಳಿಗೆ ಪಾವತಿಸಬೇಕಿರುವ ಬಾಕಿ ವಿದ್ಯಾರ್ಥಿ ವೇತನ ನೀಡಲು 100 ಕೋಟಿ ಅನುದಾನ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ವಿಧಾನ ಪರಿಷತ್ ನಲ್ಲಿ ಮಾತನಾಡಿದ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ನಿಮಗೆ ಅಲ್ಪಸಂಖ್ಯಾತರ ಮೇಲೆ ಸಿಟ್ಟಿರಬಹುದು. ಆದರೆ ಆ ವರ್ಗದ ಮಕ್ಕಳ ಮೇಲೆ ಅದನ್ನು ತೋರಿಸಬೇಡಿ. ಅಲ್ಪಸಂಖ್ಯಾತ ಸಮುದಾಯದ ಮಕ್ಕಳ ವಿದ್ಯಾರ್ಥಿ ವೇತನ ತಡೆ ಹಿಡಿಯಲಾಗಿದೆ. ಅದನ್ನು ಬಿಡುಗಡೆ ಮಾಡಿ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಅಲ್ಪಸಂಖ್ಯಾತರೂ ಸೇರಿದಂತೆ ಯಾವುದೇ ಸಮುದಾಯದ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನವನ್ನೂ ರದ್ದು ಮಾಡುವುದಿಲ್ಲ. ಬಾಕಿ ಇರುವ ವಿದ್ಯಾರ್ಥಿ ವೇತನ ವಿತರಿಸಲು 100 ಕೋಟಿ ಒದಗಿಸುತ್ತೇನೆ. ಎಲ್ಲ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನಗಳು ಮೊದಲಿನಂತೆಯೇ ಮುಂದುವರೆಯುತ್ತವೆ ಎಂದು ಭರವಸೆ ನೀಡಿದರು.
