Breaking NewsLatestಚಿಕ್ಕಮಗಳೂರುಜಿಲ್ಲಾ ಸುದ್ದಿ

ಜಾಗಕ್ಕಾಗಿ ಮಠ ಮಸೀದಿ ನಡುವೆ ವಿವಾದ: ಬಂದೋಬಸ್ತ್ ನಲ್ಲಿ ಸರ್ವೆ ಕಾರ್ಯ!

ಚಿಕ್ಕಮಗಳೂರು : ಮಠದ ಮನೆಯವರು ಹಾಗೂ ಬಡಾಮಕಾನ್ ನಡುವಿನ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ನಗರಸಭೆಯಿಂದ ಸರ್ವೆ ಕಾರ್ಯ ಅರಂಭಗೊಂಡಿದೆ. ಈ ಹಿಂದೆ ನಗರಸಭೆಗೆ ಸರ್ವೆ ನಡೆಸುವಂತೆ ಮಠದ ಮನೆಯವರ ಆಡಳಿತ ಮಂಡಳಿಯ ನಂಜಪ್ಪ ಎಂಬುವವರು ಮನವಿ ಮಾಡಿದ್ದರು. ಇದಕ್ಕೆ ಕೆಲವರಿಂದ ವಿರೋಧ ಕೂಡ ವ್ಯಕ್ತವಾಗಿತ್ತು. ಇದೀಗ ಪೊಲೀಸ್ ಬಂದೋಬಸ್ತ್ ಮೂಲಕ ಎಸಿ ನಾಗರಾಜ್, ತಹಸೀಲ್ದಾರ್ ಕಾಂತರಾಜ್ ನೇತೃತ್ವದಲ್ಲಿ ಸರ್ವೆ ಕಾರ್ಯ ಆರಂಭಗೊಂಡಿದೆ.

ಸುಮಾರು 4 ವರ್ಷಗಳಿಂದ ಬಡಾಮಕಾನ್ ಜಾಗದ ಕುರಿತು ವಿವಾದ ಹುಟ್ಟಿಕೊಂಡಿತ್ತು. ಇದು ಒಂದು ಲಕ್ಷ ಚದರ ಅಡಿ ಆಸ್ತಿ ವಿವಾದವಾಗಿದ್ದು, ನಗರದ ಹೃದಯದ ಭಾಗದಲ್ಲೇ ಜಾಗವಿತ್ತು. ತಹಶೀಲ್ದಾರ್ ಕೋರ್ಟ್, ಎಸಿ ಕೋರ್ಟ್, ಡಿಸಿ ಕೋರ್ಟ್ ನಲ್ಲಿ ಮಠದ ಮನೆಯವರ ಪರ ಆದೇಶ ನೀಡಲಾಗಿದೆ. ಜಿಲ್ಲಾ ಕೋರ್ಟ್ ನಿಂದ ಸರ್ವೆ ನಡೆಸುವಂತೆ ಸೂಚನೆ ನೀಡಿದೆ. ನಗರಸಭೆಗೂ ಆಸ್ತಿ ಸೇರಿದೆ ಎನ್ನುವ ದಾಖಲೆಗಳನ್ನು ಮಠದ ಮನೆಯವರು ಕೋರ್ಟ್ ಗೆ ಮಾಹಿತಿ ನೀಡಿದ್ದರು.

Spread the love

Related Articles

Leave a Reply

Your email address will not be published. Required fields are marked *

Back to top button