ವಿಲ್ ಸ್ಮಿತ್ಗೆ ಅತ್ಯುತ್ತಮ ನಟ ಆಸ್ಕರ್ ಪ್ರಶಸ್ತಿ

ಕಳೆದೆರಡು ವರ್ಷಗಳು ಕೋವಿಡ್ ನಿಂದ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ಸಿಂಪಲ್ ಆಗಿ ಹೋಗುತ್ತಿತ್ತು. ಇದೀಗ ಈ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಮತ್ತೆ ಕಳೆಬಂದಿದೆ. ಈ ಬಾರಿ ಆಸ್ಕರ್ ಪ್ರಶಸ್ತಿ ಸಮಾರಂಭ ಅದ್ದೂರಿಯಾಗಿ ನಡೆದಿದೆ. ರೆಡ್ ಕಾರ್ಪಟೆ ಮೇಲೆ ಸೆಲೆಬ್ರಿಟಿಗಳು ಸಖತ್ ಸ್ಟೆಪ್ಸ್ ಹಾಕಿದ್ದಾರೆ. ಖ್ಯಾತ ನಟ ವಿಲ್ ಸ್ಮಿತ್ ಅವರು ಕಿಂಗ್ ರಿಚರ್ಡ್ ಎಂಬ ಸಿನಿಮಾ ಅಭಿನಯಕ್ಕಾಗಿ ಅತ್ಯತ್ತುಮ ನಟ ಪ್ರಶಸ್ತಿ ಲಭಿಸಿದೆ. ‘ದಿ ಐಸ್ ಆಫ್ ಟ್ಯಾಮಿ ಫೇ’ ಸಿನಿಮಾದಲ್ಲಿನ ನಟನೆಗಾಗಿ ಜೆಸ್ಸಿಕಾ ಚಾಸ್ಟೇನ್ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ನೀಡಲಾಗಿದೆ. ಇದೇ ಮೊದಲ ಬಾರಿಗೆ ಮೂವರು ಮಹಿಳೆಯರು ಆಸ್ಕರ್ ಸಮಾರಂಭವನ್ನು ಹೋಸ್ಟ್ ಮಾಡಿದ್ದಾರೆ.
94ನೇ ಅಕಾಡೆಮಿ ಅವಾರ್ಡ್ಸ್ನಲ್ಲಿ ಪ್ರಶಸ್ತಿ ಪಡೆದ ಸೆಲೆಬ್ರಿಟಿಗಳ ವಿವರ ಇಲ್ಲಿದೆ
ಅತ್ಯುತ್ತಮ ನಟ: ವಿಲ್ ಸ್ಮಿತ್ (ಸಿನಿಮಾ- ಕಿಂಗ್ ರಿಚರ್ಡ್)
ಅತ್ಯುತ್ತಮ ನಟಿ: ಜೆಸಿಕಾ ಚಾಸ್ಟೇನ್ (ಸಿನಿಮಾ- ದಿ ಐಸ್ ಆಫ್ ಟ್ಯಾಮಿ ಫೇ)
ಅತ್ಯುತ್ತಮ ಸಿನಿಮಾ: ಕೋಡಾ (ನಿರ್ದೇಶನ- ಶಾನ್ ಹೆಡರ್)
ಅತ್ಯುತ್ತಮ ನಿರ್ದೇಶನ: ಜೇನ್ ಕಾಂಪಿಯನ್ (ಸಿನಿಮಾ- ದಿ ಪವರ್ ಆಫ್ ದಿ ಡಾಗ್)
ಅತ್ಯುತ್ತಮ ಒರಿಜಿನಲ್ ಸಾಂಗ್: ನೋ ಟೈಮ್ ಟು ಡೈ
ಅತ್ಯುತ್ತಮ ಅಡಾಪ್ಟೆಡ್ ಸ್ಕ್ರೀನ್ ಪ್ಲೇ: ಶಾನ್ ಹೆಡರ್ (ಸಿನಿಮಾ- ಕೋಡಾ)
ಅತ್ಯುತ್ತಮ ವಸ್ತ್ರ ವಿನ್ಯಾಸ: ಜೆನ್ನಿ ಬೀವನ್ (ಸಿನಿಮಾ: ಕ್ರುವೆಲ್ಲಾ)
