Breaking NewsLatestಜಿಲ್ಲಾ ಸುದ್ದಿವಿಜಯನಗರ

ಸುಧಾಮೂರ್ತಿ ರಾಷ್ಟ್ರಪತಿ ಆಗಬೇಕೆಂದು ವಿಶೇಷ ಪೂಜೆ

ವಿಜಯ ನಗರ: ಸಮಾಜ ಸೇವೆಗಳ ಮೂಲಕ ಸದಾ ಸುದ್ದಿಯಲ್ಲಿರೋ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಡಾ.ಸುಧಾಮೂರ್ತಿ ಅವರನ್ನು ರಾಷ್ಟ್ರಪತಿ ಮಾಡುವಂತೆ ವಿಶ್ವವಿಖ್ಯಾತ ಶ್ರೀ ವಿರೂಪಾಕ್ಷನಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.

ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ಸುಧಾಮೂರ್ತಿ ಸಾವಿರಾರು ಜನರಿಗೆ ಸಹಾಯ ಹಸ್ತ ಚಾಚಿದ್ದರು. ಊಟ, ತಿಂಡಿ ಇಲ್ಲದ ಅದೆಷ್ಟೋ ಬಡ ಕುಟುಂಬಗಳಿಗೆ ತಿಂಗಳ ದಿನಸಿ ಸಾಮಾಗ್ರಿಗಳನ್ನ ನೀಡಿದರು. ಲಾಕ್ಡೌನ್ನಿಂದಾಗಿ ಪ್ರವಾಸಿಗರಿಲ್ಲದೇ ಹೊಟ್ಟೆ ತುಂಬಿಸಿಕೊಳ್ಳಲು ಕಷ್ಟ ಪಡುತ್ತಿದ್ದ ಹಂಪಿಯಲ್ಲಿರುವ 1,500 ಗೈಡ್ಗಳ ಕುಟುಂಬಕ್ಕೆ ಆರ್ಥಿಕ ನೆರವೂ ನೀಡಿದ್ದರು. ಹೀಗಾಗಿ ಸುಧಾಮೂರ್ತಿ ಹೆಸರಿನಲ್ಲಿ ದಕ್ಷಿಣ ಕಾಶಿ ವಿಶ್ವವಿಖ್ಯಾತ ಹಂಪಿಯ ಶ್ರೀವಿರೂಪಾಕ್ಷನಿಗೆ ರುದ್ರಾಭಿಷೇಕ ಪೂಜೆ ಮಾಡಲಾಯ್ತು.

ಹಂಪಿಯ ಶ್ರೀವಿರೂಪಾಕ್ಷ ದೇವರಿಗೆ ರುದ್ರಾಭಿಷೇಕ ಪೂಜೆ ಮಾಡಿ, ಸುಧಾಮೂರ್ತಿ ಅವರು ಆದಷ್ಟು ಬೇಗ ರಾಷ್ಟ್ರಪತಿ ಹುದ್ದೆ ಅಲಂಕರಿಸಲಿ ಎಂದು ಹಂಪಿಯ ಗೈಡ್ ಮಾರ್ಗದರ್ಶಕರು ದೇವರಲ್ಲಿ ಹರಕೆ ಮಾಡಿಕೊಂಡಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button