ಸಲಾಂ ಮಂಗಳಾರತಿ ಕೈ ಬಿಟ್ಟ ಕೊಲ್ಲೂರು ಮೂಕಾಂಬಿಕೆ ದೇಗುಲ!

ಇನ್ನು ಮುಂದೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಸಲಾಂ ಮಂಗಳಾರತಿ ಹೆಸರಿನಲ್ಲಿ ಪೂಜೆ ನಡೆಯಲ್ಲ ಎಂದು ದೇವಸ್ಥಾನದ ಅರ್ಚಕರು ತಿಳಿಸಿದ್ದಾರೆ.
ಸಲಾಂ ಮಂಗಳಾರತಿ ನಡೆಸದಂತೆ ವಿಶ್ವ ಹಿಂದು ಪರಿಷತ್ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರಕ್ಕೆ ಮನವಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಸಲಾಂ ಮಂಗಳಾರತಿಯ ವಿಷಯ ರಾಜ್ಯಾದ್ಯಂತ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿತ್ತು. ಇದೀಗ ಇನ್ನು ಮುಂದೆ ಸಲಾಂ ಮಂಗಳಾರತಿ ಹೆಸರಿನಲ್ಲಿ ಪೂಜೆಗಳು ನಡೆಯಲ್ಲ ಎಂದು ದೇವಸ್ಥಾನದ ಅರ್ಚಕರು ತಿಳಿಸಿದ್ದಾರೆ.
ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದಲ್ಲಿ ಕಳೆದ ಹಲವು ವರ್ಷಗಳಿಂದ ಸಲಾಂ ಮಂಗಳಾರತಿ ಹೆಸರಿನಲ್ಲಿ ಪೂಜೆ ನಡೆಸಿಕೊಂಡು ಬರಲಾಗುತ್ತಿದೆ. 1765ರಲ್ಲಿ ಟಿಪ್ಪು ಸುಲ್ತಾನ್ ಮೂಕಾಂಬಿಕೆಯ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದ. ಆ ಬಳಿಕ ಆತನ ನೆನಪಿಗಾಗಿ ಇಲ್ಲಿ ಸಲಾಂ ಮಂಗಳಾರತಿ ಪೂಜೆಯನ್ನ ನಡೆಸಿಕೊಂಡು ಬರಲಾಗುತ್ತಿದೆ.
ಪ್ರತಿದಿನ ರಾತ್ರಿ 8 ರಿಂದ 8.15ರ ಸಮಯದಲ್ಲಿ ಅಮ್ಮನವರ ಪೂಜೆಯಾದ ಬಳಿಕ ಸಲಾಂ ಮಂಗಳಾರತಿಯನ್ನ ಮಾಡಲಾಗುತ್ತದೆ. ಆದರೆ ಸಲಾಂ ಮಂಗಳಾರತಿ ಹೆಸರನ್ನ ತೆಗೆಯುವಂತೆ ವ್ಯಾಪಕ ಒತ್ತಾಯ ಕೇಳಿ ಬಂದ ಹಿನ್ನೆಲೆಯಲ್ಲಿ ಇದೀಗ ಸಲಾಂ ಹೆಸರನ್ನ ಕೈ ಬಿಡಲಾಗುತ್ತಿದೆ.
