Breaking NewsLatestಜಿಲ್ಲಾ ಸುದ್ದಿಬೆಂಗಳೂರು ಗ್ರಾಮಾಂತರರಾಜ್ಯಸುದ್ದಿ

ಶ್ಮಶಾನ ಕುರುಕ್ಷೇತ್ರ ನಾಟಕ ವಿಶ್ವ ಮಾನವ ಸಂದೇಶದ ಸರ್ವಕಾಲಿಕ ಸತ್ಯ: ಡಾ.ಬಾಲಗುರುಮೂರ್ತಿ

ದೇವನಹಳ್ಳಿ: ಕುವೆಂಪು ಸಾಹಿತ್ಯದ ವಿಶ್ವ ಮಾನವ ಸಂದೇಶ ಸಾರ್ವಕಾಲಿಕ ಸತ್ಯ. ಜಗತ್ತಿನ ಎಲ್ಲಾ ಭಾಷೆಗಳಲ್ಲಿ, ನೋಬಲ್ ಪುರಸ್ಕಾರಕ್ಕಿಂತ ಮಿಗಿಲಾಗಿದೆ, ಅವರ ಕಾವ್ಯ, ಕಾದಂಬರಿ, ನಾಟಕಗಳು, ಪರಿಸರ, ಸಹಜ ಬದುಕಿನ ಮೌಲ್ಯಗಳಿಂದ ಕೂಡಿದೆ, ಯುದ್ದ ಭೀಕರ ಭೀತಿಯಿಂದ ನಲುಗಿರುವ ಇಂದಿನ ಜಗತ್ತಿಗೆ, ಶ್ಮಶಾನ ಕುರುಕ್ಷೇತ್ರ ನಾಟಕ, ಶೇಷ್ಠ ಸಂದೇಶವನ್ನು ನೀಡುತ್ತದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ನಿಕಟ ಪೂರ್ವ ಪ್ರಾದೇಶಿಕ ಕಾರ್ಯದರ್ಶಿ, ಸಂಸ್ಕೃತಿ ಚಿಂತಕ ಡಾ||, ಬಾಲಗುರುಮೂರ್ತಿ ತಿಳಿಸಿದರು.

ಹೊಸಕೋಟೆ ತಾಲೂಕಿನ ನಿಂಬೇಕಾಯಿಪುರದಲ್ಲಿರುವ ಜನಪದರು ಸಾಂಸ್ಕೃತಿಕ ವೇದಿಕೆ ವಿಶ್ವ ರಂಗಭೂಮಿ ದಿನಾಚರಣೆಯ ಪ್ರಯುಕ್ತ  ಆಯೋಜಿಸಿರುವ ಮೂರು ದಿನಗಳ ನಾಟಕೋತ್ಸವವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಜನಪದರು ಆಯೋಜಿಸಿರುವ ಜ್ಞಾನಪೀಠ ಪುರಸ್ಕೃತರ ಮೂರು ದಿನಗಳ ವಿಚಾರ ಸಂಕಿರಣದೊಂದಿಗಿನ ನಾಟಕೋತ್ಸವದ ವಿಚಾರ ಸಂಕಿರಣದಲ್ಲಿ ಮೊದಲ ದಿನ ಡಾ|| ಕುವೆಂಪು ಸಾಹಿತ್ಯ ಕುರಿತು ಅವರು ಮಾತನಾಡುತ್ತಿದ್ದರು. ಇದೇ ಸಂದರ್ಭದಲ್ಲಿ , ರಂಗಕರ್ಮಿ, ಜಾನಪದ ವಿದ್ವಾಂಸ ರಾಜಗೋಪಾಲ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು, ವೇದಿಕೆ ಅಧ್ಯಕ್ಷ ಕಾಟಂನಲ್ಲೂರು ಪಾಪಣ್ಣ ಮೂರು ದಿನಗಳ ಕಾಲ ಶ್ರೇಷ್ಠ ನಾಟಕಗಳನ್ನು ಆಯೋಜಿಸಿದೆ, ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಭಾಗವಹಿಸುವಂತೆ ಕರೆ ನೀಡಿದರು.

Spread the love

Related Articles

Leave a Reply

Your email address will not be published. Required fields are marked *

Back to top button