Breaking NewsLatestಬಾಲಿವುಡ್ಮನರಂಜನೆಸಿನಿಮಾ

ಭೋಪಾಲ್ ನಗರಕ್ಕೆ ಸಲಿಂಗಕಾಮಿ ಎಂಬ ಅರ್ಥ ಇದೆ: ವಿವಾದ ಸೃಷ್ಟಿಸಿದ ಕಾಶ್ಮೀರ್ ಫೈಲ್ಸ್ ನಿರ್ದೇಶಕನ ಹೇಳಿಕೆ

ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡ್ತಿದೆ. ಈಗಾಗಲೇ ಬಾಕ್ಸ್ ಆಫೀಸ್ ಕಲೆಕ್ಷನ್ ಧೂಳಿಪಟವಾಗಿದ್ದು ಅಭಿಮಾನಿಗಳು ಸಿನಿಮಾ ನೋಡೋಕೆ ಮುಂದಾಗಿದ್ದಾರೆ. ಈ ಮಧ್ಯೆ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಹೇಳಿಕೆಯೊಂದು ಬಾರಿ ವಿವಾದಕ್ಕೆ ಕಾರಣವಾಗಿದೆ.

ವಿವೇಕ್ ಅಗ್ನಿಹೋತ್ರಿಯನ್ನ ಸಾಕಷ್ಟು ಮಂದಿ ಹೊಗಳುತ್ತಿದ್ರೆ, ಮತ್ತೊಂದಷ್ಟು ಮಂದಿ ತೆಗಳುತ್ತಿದ್ದಾರೆ. ಇದೀಗ ಅಗ್ನಿಹೋತ್ರಿ ಭೋಪಾಲ್ ನಗರದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದು ಕ್ಷಮೆ ಕೇಳುವಂತೆ ಮಧ್ಯಪ್ರದೇಶದ ಕಾಂಗ್ರೆಸ್ ನಾಯಕರು ಆಗ್ರಹಿಸಿದ್ದಾರೆ.

ಕಳೆದ ಮೂರು ವಾರಗಳ ಹಿಂದೆ ಅಗ್ನಿಹೋತ್ರಿ ನೀಡಿದ ಹೇಳಿಕೆಯೊಂದು ಇದೀಗ ವೈರಲ್ ಆಗಿದ್ದು ಸಾಕಷ್ಟು ವಿರೋಧಗಳು ಕೇಳಿ ಬಂದಿದೆ. ನಾನು ಭೋಪಾಲ್ ನಲ್ಲಿ ಬೆಳೆದಿದ್ದೇನೆ. ಆದರೆ ನಾನು ಭೋಪಾಲಿ ಅಲ್ಲ. ಏಕೆಂದರೆ ಭೋಪಾಲಿ ಎಂಬ ಶಬ್ದ ಭಿನ್ನ ಅರ್ಥವನ್ನು ಹೊಂದಿದೆ. ಯಾರಾದರೂ ಬಂದು ನಾನು ಭೋಪಾಲಿ ಎಂದು ಹೇಳಿದರೆ, ಆ ವ್ಯಕ್ತಿ ಸಲಿಂಗಕಾಮಿ ಎಂದರ್ಥ. ಭೋಪಾಲ್ ನಲ್ಲಿರುವ ಯಾವುದೇ ವ್ಯಕ್ತಿಯ ಬಳಿ ಬೇಕಾದರೂ ನೀವು ಇದನ್ನು ಕೇಳಬಹುದು ಎಂದಿದ್ದಾರೆ ವಿವೇಕ್ ಅಗ್ನಿಹೋತ್ರಿ. ಸದ್ಯ, ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ವಿವೇಕ್ ಅಗ್ನಿಹೋತ್ರಿ ಹೇಳಿಕೆಯನ್ನ ಸಾಕಷ್ಟು ಮಂದಿ ಖಂಡಿಸಿದ್ದಾರೆ. ಇದೀಗ ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ‘ವಿವೇಕ್ ಅಗ್ನಿಹೋತ್ರಿ ಅವರೇ ಇದು ನಿಮ್ಮ ವೈಯಕ್ತಿಕ ಅನುಭವವಾಗಿರಬಹುದು. ಭೋಪಾಲ್ ನಿವಾಸಿಗಳು ಆ ರೀತಿ ಇಲ್ಲ. ನಾನು 1977 ರಿಂದ ಭೋಪಾಲ್ ಮತ್ತು ಭೋಪಾಲಿಗಳೊಂದಿಗೆ ಕನೆಕ್ಟ್ ಆಗಿದ್ದೇನೆ. ಆದರೆ, ನನಗೆ ಆ ರೀತಿಯ ಅನುಭವ ಆಗಿಲ್ಲ. ಈ ರೀತಿ ಅನುಭವ ಆಗಲು ನಿಮ್ಮ ಜತೆ ಯಾರಿದ್ದರು ಎಂಬುದು ಕೂಡ ಮುಖ್ಯವಾಗುತ್ತದೆ’ ಎಂದಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button