ಸಿಲಿಕಾನ್ ಸಿಟಿಯಲ್ಲಿ ಡ್ರಗ್ ಪೆಡ್ಲರ್ ಅರೆಸ್ಟ್!

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸದ್ದಿಲ್ಲದೆ ನಡೆಯುತ್ತಿದೆ ಡ್ರಗ್ಸ್ ದಂಧೆ. ಪೊಲೀಸರು ಎಷ್ಟೆ ಅಲರ್ಟ್ ಆಗಿದ್ರು ಡ್ರಗ್ ಪೆಡ್ಲರ್ ಗಳು ರಾಜಾರೋಷವಾಗಿಯೇ ಕಳ್ಳ ದಂಧೆ ನಡೆಸುತ್ತಿದ್ದಾರೆ. ಅಂದಾಗೆ ಇದೀಗ ಬೆಂಗಳೂರಿನ ಸಿಸಿಬಿ ಪೊಲೀಸರಿಗೆ ಅವನೊಬ್ಬ ಪೆಡ್ಲರ್ ಸಿಕ್ಕಿಬಿದ್ದಿದ್ದಾನೆ. ಹೌದು ಬೆಂಗಳೂರಿನಲ್ಲಿಸಿಸಿಬಿ ಪೊಲೀಸರು ಡ್ರಗ್ಸ್ ಪೆಡ್ಲರ್ ಒಬ್ಬನನ್ನು ಬಂಧಿಸಿದ್ದಾರೆ. ಹೈಗ್ರೌಂಡ್ಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡ್ರಗ್ಸ್ ಮಾರಾಟಕ್ಕೆ ಯತ್ನಿಸುತ್ತಿದ್ದಾಗ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು, ಅಜಯ್ ಕುಮಾರ್ ಎಂಬಾತನನ್ನು ಬಂಧಿಸಿದ್ದಾರೆ.
ಬಂಧಿತ ಅಜಯ್‌ಕುಮಾರ್‌ನಿಂದ 11 ಗ್ರಾಮ್ ಕೊಕೇನ್ ಹಾಗೂ ಹಲವು ಎಂಡಿಎಂಎ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಡ್ರಗ್ಸ್ ದಂಧೆ ಹೆಚ್ಚಾಗಿದ್ದು, ಸಿಸಿಬಿ ಪೊಲೀಸರು ಇದನ್ನು ಮಟ್ಟ ಹಾಕುವ ಕಾರ್ಯವನ್ನು ಮುಂದುವರೆಸಿದ್ದಾರೆ. ಬಂಧಿತ ಆರೋಪಿ ಅಜಯ್ ಕುಮಾರ್‌ನನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಆರೋಪಿ ಅಜಯ್‌ಕುಮಾರ್‌ಗೆ ಡ್ರಗ್ಸ್ ಎಲ್ಲಿಂದ ಬಂತು..?, ಇದರ ಹಿಂದೆ ಇನ್ನೂ ಯಾರು ಯಾರು ಇದ್ದಾರೆ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ.
