Latestಜಿಲ್ಲಾ ಸುದ್ದಿಬೆಂಗಳೂರುರಾಜ್ಯಸುದ್ದಿ

ಮಕ್ಕಳ ಪ್ರಶ್ನೆಗೆ ಸಲೀಸಾಗಿ ಉತ್ತರ ನೀಡಿದ ರೋಬೋ ಶಿಕ್ಷಕ


ಬೆಂಗಳೂರು: ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ಸರ್ಕಾರಿ ಶಾಲೆಯೊಂದರಲ್ಲಿ ಮಕ್ಕಳಿಗೆ ರೋಬೋ ಶಿಕ್ಷಕರಿಂದ ಪಾಠ ಮಾಡಿಸಲಾಗಿದೆ. ತಂತ್ರಜ್ಞಾನ ಆಧಾರಿತ ಇಂತಹ ಮಹತ್ವಕಾಂಕ್ಷಿ ಪ್ರಯೋಗಕ್ಕೆ ಬೆಂಗಳೂರಿನ ಮಲ್ಲೇಶ್ವರಂ ಸರ್ಕಾರಿ ಪ್ರೌಢಶಾಲೆ ಸಾಕ್ಷಿ ಯಾಗಿದೆ.

‘ಈಗಲ್’ ಹೆಸರಿನ ಯಂತ್ರ, ವಿದ್ಯಾರ್ಥಿಗಳಿಗೆ ಕನ್ನಡ, ಇಂಗ್ಲೀಷ್ ಎರಡು ಭಾಷೆಗಳಲ್ಲಿ ಸಾಮಾನ್ಯ ಶಿಕ್ಷಕ ಮನುಷ್ಯರಂತೆ ಬುಧವಾರ ಶಾಲೆಯಲ್ಲಿ ಬೋಧಿಸಿತು. ವಿದ್ಯಾರ್ಥಿಗಳೆಲ್ಲಾ ಪ್ರಶ್ನೆಗಳನ್ನು ಕೇಳಿದರು, ಕೇಳಿದ ಪ್ರಶ್ನೆಗಳಿಗೆಲ್ಲಾ ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ಉತ್ತರಿಸಿತು. ಅಂದರೆ ಸಾಮಾನ್ಯ ಶಿಕ್ಷಕರಂತೆ ಈ ಯಂತ್ರ ಕೂಡ ವಿದ್ಯಾರ್ಥಿಗಳ ಮಾತುಗಳಿಗೆ ಸೂಕ್ತ ಪ್ರತಿಕ್ರಿಯೆ ನೀಡಿತು.

Spread the love

Related Articles

Leave a Reply

Your email address will not be published. Required fields are marked *

Back to top button