ಆರೋಗ್ಯಲೈಫ್ ಸ್ಟೈಲ್

ಎಲ್ಲಿ ಸಿಕ್ಕಿದ್ರು ಬಿಡಬೇಡಿ ಈ ಹಣ್ಣು: ಸರ್ವ ರೋಗಕ್ಕೂ ಮದ್ದು ತಾಳೆ ಹಣ್ಣು

ಬೇಸಿಗೆ ಶುರುವಾಗಿದೆ. ಮನೆಯಿಂದ ಹೊರ ಹೋಗೋಕು ಜನ ಯೋಚನೆ ಮಾಡ್ತಿದ್ದಾರೆ. ಮನೆ ಒಳಗಿದ್ರು ಸೆಕೆಯಿಂದ ತಪ್ಪಿಸಿಕೊಳ್ಳೋಕೆ ನಾನಾ ರೀತಿಯ ಕಸರತ್ತುಗಳನ್ನ ಮಾಡ್ತಿದ್ದಾರೆ. ಈ ಬಿರು ಬಿಸಿಲಿನ ಸಂದರ್ಭದಲ್ಲಿ ದೇಹವನ್ನ ಕೂಲ್ ಆಗಿಡುವ ಹಣ್ಣಿನ ಬಗ್ಗೆ ನಾವ್ ನಿಮಗೆ ಹೇಳ್ತಿವಿ. ಅದೇ ತಾಳೆ ಹಣ್ಣು.

ನಾವು ಇವತ್ತು ಹೇಳೋಕೆ ಹೊರಟಿರುವ ಈ ತಾಳೆ ಹಣ್ಣು ಭಾರತದಲ್ಲಿ ವಿಶೇಷವಾಗಿ ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಪ್ರತಿ ವರ್ಷವೂ ಮಾರುಕಟ್ಟೆಯಲ್ಲಿ ಬೇಸಿಗೆ ಕಾಲದಲ್ಲಿ ಆರೋಗ್ಯಕರವಾದ ಪೌಷ್ಟಿಕಾಂಶವುಳ್ಳ ತಾಳೆ ಹಣ್ಣು ಬರುತ್ತದೆ.

ತಾಳೆ ಹಣ್ಣು ನೋಡಲು ಕಪ್ಪು ಬಣ್ಣದಲ್ಲಿ ಇದ್ದರೂ ಕೂಡ ಇದರ ಆರೋಗ್ಯಕರ ಗುಣಗಳು ಮಾತ್ರ ಹಾಲಿನಂತೆ ಶುದ್ಧವಾದದ್ದು. ಹಣ್ಣಿನ ಒಳ ಭಾಗ ನೋಡಲು ಬಿಳಿ ಬಣ್ಣದಲ್ಲಿದ್ದು ಜೆಲ್ಲಿ ರೂಪದಲ್ಲಿ ನುಣುಪಾಗಿ ಇರುತ್ತದೆ.

ತಾಳೆ ಹಣ್ಣು ತಂಪುಕಾರಕ ಆಗಿರುವುದರಿಂದ ಇದನ್ನು ಐಸ್ ಆ್ಯಪಲ್ ಅಂತ ಕರೆಯುತ್ತಾರೆ. ಇದರ ರುಚಿ ತೆಂಗಿನಕಾಯಿಯನ್ನ ಹೋಲುತ್ತದೆ. ತಾಳೆ ಹಣ್ಣು ತಂಪು ಗುಣವನ್ನು ಹೊಂದಿರುವುದರಿಂದ ಇದನ್ನು ಮಧ್ಯಾಹ್ನ ಸಮಯದಲ್ಲಿ ಸೇವನೆ ಮಾಡುವುದು ಸೂಕ್ತ ಅಂತ ಹೇಳಲಾಗಿದೆ.

ಬೇಸಿಗೆ ಹಣ್ಣು ಎಂದು ಕರೆಸಿಕೊಳ್ಳುವ ತಾಳೆ ಹಣ್ಣಿನ ಲಾಭಗಳನ್ನು ಮತ್ತು ಯಾವೆಲ್ಲ ಸಮಸ್ಯೆಗಳಿಗೆ ಇದು ಮುಕ್ತಿಯನ್ನು ಒದಗಿಸುತ್ತದೆ ಅನ್ನೋದನ್ನ ನೋಡೋಣ ಬನ್ನಿ.

ತಾಳೆಹಣ್ಣಿನಲ್ಲಿ ಅಧಿಕವಾದ ಪೋಷಕಾಂಶಗಳು ಇರುವುದರಿಂದ ಇದು ದೇಹಕ್ಕೆ ಬೇಕಾಗುವ ಮತ್ತು ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ.

ತಾಳೆಹಣ್ಣು ಸೇವನೆ ಮಾಡುವುದರಿಂದ ಕಳೆದುಕೊಂಡ ಶಕ್ತಿಯನ್ನು ಮರಳಿ ಪಡೆಯಬಹುದು. ಇದು ದೇಹದ ಶಕ್ತಿಯನ್ನು ದುಪಟ್ಟು ಮಾಡುವುದರ ಜೊತೆಗೆ ದೇಹದ ಸುಸ್ತು ನಿಶ್ಯಕ್ತಿಯನ್ನು ಕಡಿಮೆ ಮಾಡಿ ದೇಹವನ್ನು ಸದೃಢವಾಗಿಸುತ್ತದೆ.

ಶ್ರಮದ ಕೆಲಸವನ್ನು ಮಾಡಿ ತುಂಬಾನೇ ದಣಿವು ಆಗುತ್ತಿದ್ದರೆ ಈ ಹಣ್ಣು ಸೇವನೆ ಮಾಡುವುದರಿಂದ ದೇಹದ ಸುಸ್ತು ಆಯಾಸ ಕಡಿಮೆ ಆಗುತ್ತದೆ. ಇನ್ನೂ ಕೆಲವರಿಗೆ ವರ್ಷವಿಡೀ ಬೆವರುವ ಸಮಸ್ಯೆ ಇರುತ್ತದೆ. ಅವರು ಈ ತಾಳೆ ಹಣ್ಣು ಸೇವನೆ ಮಾಡಿದರೆ ಕ್ರಮೇಣ ಬೆವರುವುದು ಕಡಿಮೆ ಆಗುತ್ತದೆ. ಇನ್ನೂ

ಹಲವಾರು ಬಗೆಯ ಹೊಟ್ಟೆಯ ವ್ಯಾಧಿಗಳಿಗೆ ಇದು ರಾಮಬಾಣವಾಗಿ ಕೆಲಸವನ್ನು ಮಾಡುತ್ತದೆ. ಅಷ್ಟೇ ಅಲ್ಲದೆ ನೈಸರ್ಗಿಕವಾಗಿ ಕೆಲಸವನ್ನು ಮಾಡುತ್ತದೆ. ತಾಳೆ ಹಣ್ಣಿನ ಮತ್ತೊಂದು ಅದ್ಭುತವಾದ ಲಕ್ಷಣ ಏನೆಂದರೆ ಇದು ದೇಹದಲ್ಲಿ ಗ್ಲೂಕೋಸ್ ಮಟ್ಟವನ್ನು ಹೆಚ್ಚಿಸುತ್ತದೆ. ಮತ್ತು ದೇಹಕ್ಕೆ ಬೇಕಾಗುವ ಮತ್ತು ಅಗತ್ಯವಾದ ಖನಿಜಗಳನ್ನು ಪೋಷಕಾಂಶಗಳನ್ನು ಈ ತಾಳೆ ಹಣ್ಣು ಒದಗಿಸುತ್ತದೆ

ತೂಕವನ್ನು ಇಳಿಸಿಕೊಳ್ಳುವವರಿಗೆ ತಾಳೆ ಹಣ್ಣು ಸೂಪರ್ ಫುಡ್ ಅಂತ ಹೇಳಬಹುದು. ತೂಕವನ್ನು ಇಳಿಸಿಕೊಳ್ಳುವವರು ವ್ಯಾಯಾಮದ ಜೊತೆಗೆ ಈ ತಾಳೆ ಹಣ್ಣು ಸೇವಿಸಿದರೆ ದೇಹದ ತೂಕ ಗಣನೀಯವಾಗಿ ಇಳಿಯುವುದು ಜೊತೆಗೆ ಹೊಟ್ಟೆಯ ಸುತ್ತು ಬೆಳೆದಿರುವ ಬೊಜ್ಜು ಕೂಡ ಕ್ರಮೇಣ ಕಡಿಮೆ ಆಗುತ್ತದೆ.

ಇನ್ನೂ ದೇಹದ ಯಾವುದೇ ಭಾಗದಲ್ಲಿ ತುರಿಕೆ ಕಾಣಿಸಿಕೊಂಡರೆ ಈ ತಾಳೆ ಹಣ್ಣಿನಲ್ಲಿ ಇರುವ ವಿಟಮಿನ್ ಎ ಮತ್ತು ವಿಟಮಿನ್ ಬಿ, ಸಿ ಮತ್ತು ಕಬ್ಬಿಣ ಖನಿಜಗಳು ಅದನ್ನು ಕಾಪಾಡುತ್ತದೆ. ತುರಿಕೆ ಅನ್ನುವುದು ಕ್ರಮೇಣ ಉಪಶಮನ ಆಗುತ್ತದೆ. ನೀವು ಚಿಕನ್ ಪೋಕ್ಸ್ ಸಮಸ್ಯೆಯಿಂದ ಬಳಲುತ್ತಿದ್ದರೆ ಈ ತಾಳೆ ಹಣ್ಣು ಸೇವನೆ ಮಾಡಿರಿ ಇದು ಚಿಕನ್ ಪೊಕ್ಸ್ ಅನ್ನು ಕಡಿಮೆ ಮಾಡಿ ದೇಹವನ್ನು ತಂಪಾಗಿ ಮಾಡುತ್ತದೆ. ಜೊತೆಗೆ ಮಲಬದ್ಧತೆ ಸಮಸ್ಯೆಯನ್ನು ಹೋಗಲಾಡಿಸಲು ನಮ್ಮ ಪೂರ್ವಜರು ತಾಳೆ ಹಣ್ಣು ಬಳಕೆ ಮಾಡುತ್ತಿದ್ದರು.

Spread the love

Related Articles

Leave a Reply

Your email address will not be published. Required fields are marked *

Back to top button