Breaking NewsLatestಕಲಬುರ್ಗಿಚರ್ಚೆಜಿಲ್ಲಾ ಸುದ್ದಿರಾಜಕೀಯರಾಜ್ಯಸುದ್ದಿ

ಗಾಂಧಿ ಹತ್ಯೆಗಿಂತ ದೊಡ್ಡ ಚಿತ್ರಬೇಕಾ.? ಬಿಜೆಪಿಗೆ ಡಿಕೆಶಿ ಪಂಚ್!

ಕಲಬುರಗಿ: ಗಾಂಧಿ ಹತ್ಯೆಗಿಂತ ದೊಡ್ಡ ಚಿತ್ರಬೇಕಾ? ಕಾಶ್ಮೀರ ಫೈಲ್ಸ್ ಸಿನಿಮಾದಲ್ಲಿ ಅಂಥ ವಿಶೇಷ ಏನಿದೆ.? ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರಶ್ನೆ ಮಾಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿಕೆಶಿ, ಜೇಮ್ಸ್ ಚಿತ್ರ ಎತ್ತಂಗಡಿಗೆ ಬಿಜೆಪಿ ಶಾಸಕರ ಒತ್ತಡ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದರು.

ನನಗೂ ಚಿತ್ರರಂಗದ ಅನೇಕರಿಂದ ಫೋನ್ ಬರ್ತಾ ಇವೆ. ಜೇಮ್ಸ್ ಚಿತ್ರ ತೆಗೆದು ಕಾಶ್ಮೀರಿ ಫೈಲ್ಸ್ ಹಾಕುವಂತೆ ಬಿಜೆಪಿ ಶಾಸಕರು, ಮಂತ್ರಿಗಳು ಪೋನ್ ಮಾಡಿ ಹೇಳುತ್ತಿದ್ದಾರೆ ಎನ್ನುತ್ತಿದ್ದಾರೆ‌. ಕಾಶ್ಮೀರ ಫೈಲ್ಸ್ ಸಿನಿಮಾದಲ್ಲಿ ಅಂಥ ವಿಶೇಷ ಏನಿದೆ.? ಗಾಂಧಿ ಚಿತ್ರಕ್ಕಿಂತ ಬೇರೆ ಉತ್ತಮ ಚಿತ್ರ ಇದೆಯಾ? ಈ ಚಿತ್ರದ ಮೂಲಕ ಕಾಂಗ್ರೆಸ್ ನವರು ಕೆಟ್ಟವರು ಅಂತ ಬಿಜೆಪಿಯವರು ಬಿಂಬಿಸುತ್ತಿದ್ದಾರೆ. ಬಿಜೆಪಿಯವರು ತಮ್ಮ ಪಕ್ಷದ ಅಜೆಂಡಗಾಗಿ ದಿ‌ ಕಾಶ್ಮೀರ್ ಫೈಲ್ ಸಿನೆಮಾ ಮಾಡಿದ್ದಾರೆ. ದಿ ಕಶ್ಮೀರ್ ಫೈಲ್ಸ್ ಚಿತ್ರಕ್ಕೆ ತೆರಿಗೆ ರಿಯಾಯತಿ ಕೊಡುವುದಕ್ಕೇನಿದೆ? ಪುನೀತ್ ರಾಜಕುಮಾರ ಕನ್ನಡ ನೆಲದ ಮೇರು ನಟ, ದೇಶಕಂಡ ಮಹಾನ್ ಕಲಾವಿದ. ಅವರ ಕೊನೆಯ ಚಿತ್ರಕ್ಕೆ ತೊಂದರೆ ಕೊಡುವುದು ಸರಿಯಲ್ಲಾ, ಮುಖ್ಯಮಂತ್ರಿಗಳು ಈ ವಿಚಾರದ ಬಗ್ಗೆ ಗಮನಹರಿಸಬೇಕು ಎಂದರು.

ಮುಸ್ಲಿಂ ವ್ಯಾಪಾರಿಗಳಿಗೆ ತೊಂದರೆ ವಿಚಾರ

ದಕ್ಷಿಣ ಕನ್ನಡ ಜಿಲ್ಲೆಯ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ವಿಚಾರವಾಗಿ ಮಾತನಾಡಿದ ಡಿಕೆಶಿ, ಈ ರೀತಿ ವರ್ತಿಸುವುದು ಸರಿಯಲ್ಲಾ, ಎಲ್ಲ ಕಡೆ ಎಲ್ಲರಿಗೂ ವ್ಯಾಪಾರಕ್ಕೆ ಅವಕಾಶ ನೀಡಬೇಕು. ಹಾಗಾದ್ರೆ ಚರ್ಚ್, ಮಸೀದಿ ಮುಂದೆ ಹಿಂದುಗಳಿಗೆ ಅವಕಾಶ ನೀಡದೇ ಹೋದ್ರೆ ಏನಾಗುತ್ತೆ. ಅನೇಕರು ಅನೇಕ ರೀತಿಯ ಕೆಲಸ ಮಾಡುತ್ತಿದ್ದಾರೆ. ಯಾರಿಗೂ ಯಾರೇ ತೊಂದರೆ ಕೊಡುವ ಕೆಲಸವನ್ನು ಮಾಡಬಾರದು ಎಂದು ಡಿಕೆ ಶಿವಕುಮಾರ ಹೇಳಿದರು.

Spread the love

Related Articles

Leave a Reply

Your email address will not be published. Required fields are marked *

Back to top button