Breaking NewsLatestಮನರಂಜನೆಸಿನಿಮಾಸೆಲೆಬ್ರಿಟಿಸ್ಯಾಂಡಲ್ ವುಡ್

ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಬರೆದ ಜೇಮ್ಸ್ ಸಿನಿಮಾ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಕೊನೆಯ ಸಿನಿಮಾ ಜೇಮ್ಸ್ ಅಪ್ಪು ಹುಟ್ಟುಹಬ್ಬದ ಪ್ರಯುಕ್ತ ರಿಲೀಸ್ ಆಗಿದೆ. ಸಾಕಷ್ಟು ನಿರೀಕ್ಷೆಯೊಂದಿಗೆ ತೆರೆಗೆ ಬಂದ ಚಿತ್ರ ಬಾಕ್ಸ್ ಆಫೀಸ್ ಕಲೆಕ್ಷನ್ ದೂಳಿಪಟ ಮಾಡಿದೆ. ಸಿನಿಮಾ ರಿಲೀಸ್ ಆದ ನಾಲ್ಕೇ ನಾಲ್ಕು ದಿನಕ್ಕೆ 100 ಕೋಟಿ ಕಲೆಕ್ಷನ್ ಮಾಡಿದೆ.

ಪುನೀತ್ ನಟನೆಯ ಕೊನೆಯ ಸಿನಿಮಾ ಈ ಮಟ್ಟದಲ್ಲಿ ಕಲೆಕ್ಷನ್ ಮಾಡಿರೋದು ಸಹಜವಾಗಿಯೇ ಅಭಿಮಾನಿಗಳಲ್ಲಿ ಖುಷಿ ತರಿಸಿದೆ. ಮುಂದಿನ ದಿನಗಳಲ್ಲಿ ಕಲೆಕ್ಷನ್ ಮತ್ತಷ್ಟು ಹೆಚ್ಚಾಗಲಿದೆ ಅನ್ನೋ ಮಾತು ಕೇಳಿ ಬರ್ತಿದೆ.

ಗುರುವಾರ ತೆರೆಕಂಡ ಸಿನಿಮಾ ಮೊದಲ ದಿನವೇ ಸಾಕಷ್ಟು ಫ್ಯಾನ್ಸ್ ಶೋಗಳು ನಡೆದಿತ್ತು. ಮೊದಲ ದಿನ 30 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ್ದ ಸಿನಿಮಾ ನಾಲ್ಕನೆ ದಿನ 100 ಕೋಟಿ ಕ್ಲಬ್ ಸೇರಿದೆ. ಈ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಜೇಮ್ಸ್ ಸಿನಿಮಾ ದಾಖಲೆ ಬರೆದಿದೆ.

ಸ್ಯಾಂಡಲ್ ವುಡ್ ನಲ್ಲಿ ಯಾವ ಸಿನಿಮಾವು ಇದುವರೆಗೂ ನಾಲ್ಕೇ ನಾಲ್ಕು ದಿನಕ್ಕೆ 100 ಕೋಟಿ ಕಲೆಕ್ಷನ್ ಮಾಡಿರಲಿಲ್ಲ. ಇದೀಗ ಜೇಮ್ಸ್ ಇತಿಹಾಸ ಕ್ರಿಯೇಟ್ ಮಾಡಿದ್ದು ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button