ಬ್ರೇಜಿಲ್ ನಲ್ಲಿ ಮತ್ತೆ ಪ್ರವಾಹ: ಐದು ಮಂದಿ ದುರ್ಮರಣ, ನಾಲ್ವರು ನಾಪತ್ತೆ

ಬ್ರೆಜಿಲ್ ನ ಜನತೆ ಮತ್ತೆ ಬೆಚ್ಚಿ ಬಿದ್ದಿದೆ. ಕಳೆದ ತಿಂಗಳು ಧಾರಕಾರ ಮಳೆಯಿಂದ ಉಂಟಾದ ಪ್ರವಾಹದಿಂದ 233 ಮಂದಿ ಮೃತಪಟ್ಟಿದ್ದು ಇದೀಗ ಮತ್ತೆ ಪ್ರವಾಹ ಕಾಣಿಸಿಕೊಂಡಿದೆ. ಬ್ರೆಜಿಲ್ ನ ಪ್ರವಾಸಿ ಸ್ಥಳವಾದ ಪೆಟ್ರೋಪೊಲಿಸ್ ನಲ್ಲಿ ಧಾರಾಕಾರ ಮಳೆಯಿಂದ ಉಂಟಾದ ಪ್ರವಾಹದಲ್ಲಿ ಈಗಾಗ್ಲೆ ಐದು ಮಂದಿ ಮೃತಪಟ್ಟಿದ್ದು ಭಾನುವಾರದಿಂದ ಮತ್ತೆ ನಾಲ್ವರು ನಾಪತ್ತೆಯಾಗಿರೋದಾಗಿ ವರದಿಯಾಗಿದೆ.
ಪ್ರವಾಹದಿಂದ ಭೂಕುಸಿತವಾಗಿದ್ದು ಸುಮಾರು 100ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಕಳೆದ ತಿಂಗಳು ಪ್ರವಾಹ ಹಾಗೂ ಭೂ ಕುಸಿತದಿಂದ ಮೃತಪಟ್ಟ ವ್ಯಕ್ತಿಗಳ ಸ್ಮರಣಾರ್ಥವಾಗಿ ನಿರ್ಮಿಸಲಾದ ಶಿಲುಬೆಗಳು ಸೇರಿದಂತೆ ತನ್ನ ಹಾದಿಯಲ್ಲಿ ಎದುರಾದ ಪ್ರತಿಯೊಂದನ್ನ ಪ್ರವಾಹ ತನ್ನ ಜೊತೆಗೆ ಕರೆದೊಯ್ದಿದೆ. ಪ್ರವಾಹದ ಭೀಕರತೆಯ ವಿಡಿಯೋವನ್ನ ಅಲ್ಲಿನ ಸ್ಥಳೀಯರು ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿದ್ದಾರೆ.
ಪ್ರವಾಹಕ್ಕೆ ಸಿಲುಕಿದ ಸುಮಾರು 28ಕ್ಕೂ ಅಧಿಕ ಮಂದಿಯನ್ನ ರಕ್ಷಿಸಿದ್ದು 500ಕ್ಕೂ ಹೆಚ್ಚು ಜನರಿಗೆ ತಾತ್ಕಾಲಿಕ ವಸತಿ ಕಲ್ಪಿಸಲು 20ಕ್ಕೂ ಹೆಚ್ಚು ಶೆಲ್ಟರ್ ಗಳನ್ನ ನಿರ್ಮಿಸಿರೋದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
