ಕ್ರೈಂಜಿಲ್ಲಾ ಸುದ್ದಿಮೈಸೂರು
ಮಗಳ ಸಾವಿನಿಂದ ಮನನೊಂದಿದ್ದ ತಂದೆ ಹೃದಯಾಘಾತದಿಂದ ಸಾವು

ಮೈಸೂರು: ಮಗಳ ಸಾವಿನಿಂದ ಮನ ನೊಂದಿದ್ದ ತಂದೆ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಜೆ.ಪಿ.ನಗರ ನಿವಾಸಿ ಮಹದೇವಶೆಟ್ಟಿ (46) ಹೃದಯಾಘಾತದಿಂದ ಮೃತಪಟ್ಟಿರುವ ವ್ಯಕ್ತಿ. ಮಹದೇವಶೆಟ್ಟಿ ಮಗಳು ನಂದಿನಿ ಒಂದು ತಿಂಗಳ ಹಿಂದೆ ಟಿ.ಕೆ.ಲೇಔಟ್ನಲ್ಲಿರುವ ಗಂಡನ ಮನೆಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು. ಗಂಡನ ಮನೆಯವರ ವರದಕ್ಷಿಣೆ ಕಿರುಕುಳದಿಂದ ಮಗಳು ಸಾವನ್ನಪ್ಪಿದ್ದಾಳೆ ಎಂದು ಮಹದೇವಶೆಟ್ಟಿ ದೂರು ನೀಡಿದ್ದರು.
ಮಗಳ ಸಾವಿಗೆ ಕಾರಣರಾದವರಿಗೆ ಶಿಕ್ಷೆ ದೊರೆಯಲಿಲ್ಲ ಎಂಬ ನೋವು ಮಹದೇವಶೆಟ್ಟಿ ಅವರಲ್ಲಿ ಇತ್ತು. ಇದೇ ನೋವಿನಿಂದ ಖಿನ್ನತೆಗೆ ಒಳಗಾಗಿ ಹೃದಯಾಘಾತವಾಗಿದೆ ಎನ್ನಲಾಗಿದೆ.
ಜೆ.ಪಿ.ನಗರದ ಗೊಬ್ಬಳಿಮರದ ಬಳಿ ಇರುವ ಅಂಗಡಿ ಬಳಿ ಕುಳಿತಿರುವ ಸಂದರ್ಭ ಹೃದಯಾಘಾತವಾಗಿದೆ. ಸ್ಥಳೀಯರು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋದರು ಅಷ್ಟರಲ್ಲಾಗಲೇ ಮೃತಪಟ್ಟಿದ್ದಾರೆ. ಈ ಸಂಬಂಧ ವಿದ್ಯಾರಣ್ಯಪುರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.




