ಸಮಂತಾಗಾಗಿ ಬಂದ ಹಾಲಿವುಡ್ ಸ್ಟಂಟ್ ಮಾಸ್ಟರ್

ನಟಿ ಸಮಂತ ಸಿನಿಮಾಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಹೋಮ್ಲಿ ಪಾರ್ಥಗಳ ಜೊತೆ ಜೊತೆಗೆ ಆಕ್ಷನ್ ಸೀನ್ ಗಳಲ್ಲಿ ಕಾಣಿಸಿಕೊಳ್ತಿರೋ ಸಮಂತಾರ ಡಿಮ್ಯಾಂಡ್ ಸಖತ್ ಜಾಸ್ತಿಯಾಗಿದೆ. ಸಮಂತ ಚಿತ್ರಕ್ಕೆ ನಿರ್ದೇಶನ ಮಾಡಲು ನಿರ್ದೇಶಕರು ಕ್ಯೂನಲ್ಲಿ ನಿಂತಿದ್ದಾರೆ. ಇದೀಗ ಸಮಂತಾಗೆ ಆಕ್ಷನ್ ಕಟ್ ಹೇಳಿಕೊಡೊಕೆ ಹಾಲಿವುಡ್ ಸ್ಟಂಟ್ ಮಾಸ್ಟರ್ ಬಂದಿದ್ದಾರೆ.
ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸ್ತಿರೋ ಸಮಂತ ಸದ್ಯ ಯಶೋಧಾ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಹರಿ ಶಂಕರ್ ಹಾಗೂ ಹರಿ ನಾರಾಯಣ್ ನಿರ್ದೇಶನದ ಸಿನಿಮಾ ಯಶೋಧ ದೊಟ್ಟ ಮಟ್ಟದಲ್ಲಿ ನಿರೀಕ್ಷೆ ಹುಟ್ಟಿಹಾಕಿದೆ. ಸೈನ್ಸ್ ಫಿಕ್ಷನ್ ಶೈಲಿಯಲ್ಲಿ ಮೂಡಿ ಬರುತ್ತಿರುವ ಯಶೋಧಾ ಸಿನಿಮಾದಲ್ಲಿ ಸಮಂತಾ ಆಕ್ಷನ್ ದೃಶ್ಯಗಳಲ್ಲಿ ಮಿಂಚಲಿದ್ದಾರೆ. ಈ ಚಿತ್ರಕ್ಕೆ ಸಮಂತಾಗೆ ಆಕ್ಷನ್ ದೃಶ್ಯಗಳಲ್ಲಿ ಹೇಳಿಕೊಡಲು ಹಾಲಿವುಡ್ ಸ್ಟಂಟ್ ಮಾಸ್ಟರ್ ಆಗಮಿಸಿದ್ದಾರೆ.
ಹಾಲಿವುಡ್ ಸ್ಟಂಟ್ ಮಾಸ್ಟರ್ ಯನ್ನಿಕ್ ಬೇನ್ ‘ಯಶೋಧಾ’ ಸಿನಿಮಾಗಾಗಿ ಭಾರತಕ್ಕೆ ಆಗಮಿಸಿದ್ದಾರೆ. ‘ಟ್ರಾನ್ಸ್ಪೋರ್ಟರ್ 3’, ‘ಇನ್ಸೆಪ್ಶನ್’, ‘ರಯೀಸ್’, ‘ಟೈಗರ್ ಜಿಂದಾ ಹೈ’ ಮೊದಲಾದ ಸಿನಿಮಾಗಳಿಗೆ ಆ್ಯಕ್ಷನ್ ಹೇಳಿಕೊಟ್ಟಿದ್ದ ಯನ್ನಿಕ್ ಬೇನ್ ಇದೀಗ ಯಶೋಧಾ ಚಿತ್ರಕ್ಕಾಗಿ ಸಮಂತಾ ಅವರನ್ನು ಟ್ರೇನ್ ಮಾಡಲಿದ್ದಾರೆ. ಇತ್ತೀಚೆಗೆ ಯಶೋಧ ಸಿನಿಮಾ ತಂಡ ಒಂದು ಹಂತದ ಶೂಟಿಂಗ್ ಪೂರ್ಣಗೊಳಿಸಿದೆ.
ನಾಗಚೈತನ್ಯರಿಂದ ವಿಚ್ಚೇದನ ಪಡೆದ ಬಳಿಕ ಸಮಂತಾ ಬಾಲಿವುಡ್ ಚಿತ್ರರಂಗದತ್ತ ದೃಷ್ಟಿ ನೆಟ್ಟಿದ್ದಾರೆ. ಇದೇ ಕಾರಣಕ್ಕೆ ದಕ್ಷಿಣ ಭಾರತದ ಸಿನಿಮಾಗಳತ್ತ ಗಮನ ಹರಿಸುತ್ತಿಲ್ಲ ಎಂಬ ಅಂತೆ ಕಂತೆಗಳು ಹರಿದಾಡ್ತಿದೆ. ಆದರೆ ಸಮಂತಾ ಮಾತ್ರ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಸಿನಿಮಾಗಳ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.
