Breaking NewsLatestಕೋಲಾರಜಿಲ್ಲಾ ಸುದ್ದಿ

75 ವರ್ಷಗಳ ಬಳಿಕ ಕ್ಲಾಕ್ ಟವರ್ ಮೇಲೆ ಹಾರಾಡಿತ್ತು ತ್ರಿವರ್ಣ ಧ್ವಜ

ಕೋಲಾರ: ನಗರದ ಕ್ಲಾಕ್ ಟವರ್ ಮೇಲೆ 75 ವರ್ಷಗಳ ನಂತರ ತ್ರಿವರ್ಣ ಧ್ವಜ ಶನಿವಾರ ಮೂರು ಗಂಟೆಗೆ ಜಿಲ್ಲಾಡಳಿತ ವತಿಯಿಂದ ಹಾರಿಸಲಾಯಿತು. ಸಂಸದ ಮುನಿಸ್ವಾಮಿ ಕ್ಲಾಕ್ ಟವರ್ ಮೇಲೆ ತ್ರಿವರ್ಣ ಧ್ವಜ ಹಾರಿಸುವ ತನಕ ಏಕಾಂಗಿ ಪ್ರತಿಭಟನೆ ನಡೆಸುವುದಾಗಿ ಹಠಕ್ಕೆ ಬಿದ್ದದರು.

ಇದನ್ನು ನಿರಾಕರಿಸಿ ಜಿಲ್ಲಾಡಳಿತ ವತಿಯಿಂದ ಮುಸ್ಲೀಂ ಮುಖಂಡರ ಬೆಂಬಲ ಪಡೆದು ಕ್ಲಾಕ್ ಟವರ್ ಮೇಲೆ ತ್ರಿವರ್ಣ ಧ್ವಜ ಹಾರಿಸಿದರು. ಕ್ಲಾಕ್ ಟವರ್ ನಲ್ಲಿ ಕಳೆದ ಎರಡು ದಿನಗಳಿಂದ ತ್ರಿವರ್ಣ ಧ್ವಜ ಹಾರಿಸುವ ವಿಚಾರವಾಗಿ ಉದ್ರಿಕ್ತ ವಾತಾವರಣ ಉಂಟಾಗಿತ್ತು.

ಸಂಸದ ಮುನಿಸ್ವಾಮಿ ಕಳೆದ ಎರಡು ದಿನಗಳ ಹಿಂದೆ ಸುದ್ದಿಗೋಷ್ಠಿ ನಡೆಸಿ ಕ್ಲಾಕ್ ಟವರ್ ಮೇಲೆ ಧ್ವಜ ಹಾರಿಸುವ ಸಲುವಾಗಿ ನಗರದಲ್ಲಿ 144 ಸೆಕ್ಷನ್ ಇರುವುದರಿಂದ ಶುಕ್ರವಾರದಿಂದ ಏಕಾಂಗಿ ಪ್ರತಿಭಟನೆ ನಡೆಸಿದರು. ಈ ವೇಳೆ ಎರಡು ದಿನಗಳ ಒಳಗಾಗಿ ಧ್ವಜವನ್ನು ಜಿಲ್ಲಾಡಳಿತ ಹಾರಿಸಬೇಕು ಎಂದು ಸಂಸದ ಮುನಿಸ್ವಾಮಿ ಶುಕ್ರವಾರ ಗಡವು ನೀಡಿ ಸೋಮವಾರದಿಂದ ಅನುಮತಿ ಇಲ್ಲದೆ ಪ್ರತಿಭಟನೆ ನಡೆಸುವುದಾಗಿ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದರು.
ಜಿಲ್ಲಾಡಳಿತ ಸ್ಥಳ ಪರಿಶೀಲನೆ ನಡೆಸಿ ಸ್ಥಳೀಯ ಮುಸ್ಲೀಂ ಮುಖಂಡರೊಂದಿಗೆ ಚರ್ಚಿಸಿ ಶುಕ್ರವಾರ ರಾತ್ರಿಯೇ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಂಡ ತ್ರಿವರ್ಣ ಧ್ವಜದ ಬಣ್ಣವನ್ನು ಬಳಿದು ಮಧ್ಯಾಹ್ನ ೩ ಗಂಟೆಗೆ ತ್ರಿವರ್ಣ ಧ್ವಜವನ್ನು ಹಾರಿಸಿದರು.

ಬ್ಯಾಂಡ್ ಸೆಟ್ ಮೂಲಕ ರಾಷ್ಟ್ರಗೀತೆ

ಜಿಲ್ಲಾಧಿಕಾರಿ ವೆಂಕಟರಾಜು ಹಾಗು ಎಸ್ ಪಿ ದೆವರಾಜ್ ಹಾಗು ಮುಸ್ಲೀಂ ಸಮುದಾಯದ ನಾಲ್ಕು ಜನ ಮುಖಂಡರು ಸೇರಿ ಧ್ವಜಾರೋಹಣವನ್ನು ನೆರವೇರಿಸಿದರು. ಈ ವೇಳೆ ಬ್ಯಾಂಡ್‌ಸೆಟ್‌ಗಳ ಮೂಲಕ ರಾಷ್ಟ್ರ ಗೀತೆ ಹಾಡಿ ಧ್ವಜಾರೋಹಣ ನೆರವೇರಿಸಿದರು. ಆ ಸಂದರ್ಭದಲ್ಲಿ ಮುಸ್ಲೀಂ ಹಿರಿಯ ಮುಖಂಡರು ಹಿಂದೂಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದರು.

Spread the love

Related Articles

Leave a Reply

Your email address will not be published. Required fields are marked *

Back to top button