Breaking NewsLatestರಾಜ್ಯಸುದ್ದಿ

ಸಿಲಿಕಾನ್ ಸಿಟಿಯ ಹಲವು ಕಡೆಗಳಲ್ಲಿ ಇಂದು ಮತ್ತು ನಾಳೆ ವಿದ್ಯುತ್ ಕಡಿತ

ರಣ ರಣ ಬಿಸಿಲಿನಿಂದ ಬೆಂದು ಹೋಗ್ತಿರೋ ಸಿಲಿಕಾನ್ ಸಿಟಿ ಮಂದಿಗೆ ಬೇಸ್ಕಾಂ ಎರಡು ದಿನಗಳ ಕಾಲ ಮತ್ತಷ್ಟು ಬಿಸಿ ಹೆಚ್ಚಿಸಲಿದೆ. ಸಿಲಿಕಾನ್ ಸಿಟಿ ಬೆಂಗಳೂರಿನ ಹಲವು ಕಡೆಗಳಲ್ಲಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ನಗರದ ಹಲವು ಕಡೆಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಶಾಂತಿನಿಕೇತನ ಲೇಔಟ್, ಡೆಂಟಲ್ ಕಾಲೇಜು ರಸ್ತೆ, ಬೋಗನಹಳ್ಳಿ ಮುಖ್ಯ ರಸ್ತೆ ವಿವೇಕಾನಂದ ಲೇ ಔಟ್ ಮುನೆಕೊಳಲ ಡೆಂಟಾಲ್ ಕಾಲೇಜು ರಸ್ತೆ, ಲೇಕ್ ಡ್ಯೂ ಲೇಔಟ್ CKB ಲೇಔಟ್, ಜೆ.ಪಿ.ನಗರ 9ನೇ ಹಂತ, ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಇಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6.30ರ ಸಮಯದಲ್ಲಿ ವಿದ್ಯುತ್ ವ್ಯತ್ಯಯ ವಾಗಲಿದೆ.

ಬೆಳಗ್ಗೆ11 ರಿಂದ ಸಂಜೆ 6 ಗಂಟೆಯವರೆಗೆ ಮುದ್ದಲಿಂಗನ ಹಳ್ಳೀ, ಓಬಳಾಪುರ, ಕೊಡಿಗೇಹಳ್ಳಿ, ಕೃಷ್ಣಾಪುರ್ ಪುರ ಬೈರತಿ ಎಚ್‌ಬಿಆರ್ ಗ್ರಾಫೈಟ್ ರಸ್ತೆ ಗಾಯತ್ರಿ ಲೇಔಟ್, ಬೆತೆಲ್ ನಗರ, ಸ್ವತಂತ್ರ ನಗರ, ತೆಂಗಿನ ತೋಟ, ಆಲ್ಫಾ ಗಾರ್ಡನ್ ಕಾಡುಗೋಡಿ, ಶಂಕ್ರಪುರ, ಸಿದ್ದಾರ್ಥ ಲೇಔಟ್, ಸಾಯಿ ಆಶ್ರಮ ಗೌತಮಪುರ, ಜೋಗುಪಾಳ್ಯ, ಇಲ್ಪೆ ತೋಪು ಕೇಂಬ್ರಿಡ್ಜ್ ಬಡಾವಣೆ ಆವರಣದಲ್ಲಿ ಇಂದು ವಿದ್ಯುತ್ ಸಮಸ್ಯೆ ಆಗಲಿದೆ.

ಮಾರ್ಚ್ 19ರಂದು ಬಳಗ್ಗೆ 11 ಗಂಟೆಯಿಂದ ರಿಂದ ಸಂಜೆ 6 ಗಂಟೆಯವರೆಗೆ ಹುಸ್ಕೂರು, ಬೆಂಡೈಗಾನಹಳ್ಳಿ, ಲಘುಮೇನಹಳ್ಳಿ, ಪೃಕ್ಷಾ, ನಿಂಬೆಕೈಪುರ, ಬೊಮ್ಮೇನಹಳ್ಳಿ, ಮಂಡೂರು, ಗುಂಡೂರು, ಹಂಚರಹಳ್ಳಿ, ಕಟ್ಟುಗೊಲ್ಲಹಳ್ಳಿ, ಶೃಂಗಾರಿಪುರ, ಜ್ಯೋತಿಪುರ, ತಿರುಮೇನಹಳ್ಳಿ ನಾರಾಯಣಪುರ ಕ್ರಾಸ್ ಕಾಫಿ ಬೋರ್ಡ್ ಲೇಔಟ್, ಮಾರುತಿ ರಾಮನಗರ, ಕೆ.ಜಿ.ಆರ್.ಎ.ನಗರದ ಕೆ.ಜಿ.ಆರ್.ಎ.ನಗರದ ಕೆ.ಜಿ.ಆರ್.ಎ.ಪಿ.ಯು ಮೆಡಿಕಲ್ಸ್, ಕೆ.ಜಿ. ರಸ್ತೆಗಳಲ್ಲಿ ವಿದ್ಯುತ್ ಕೈ ಕೊಡಲಿದೆ.

ಕೇವಲ ಇವಿಷ್ಟೇ ಅಲ್ಲ ಬೆಂಗಳೂರಿನ ಇನ್ನೂ ಸಾಕಷ್ಟು ಕಡೆಗಳಲ್ಲಿ ಇಂದು ಮತ್ತು ನಾಳೆ ವಿದ್ಯುತ್ ಸಮಸ್ಯೆ ಕಾಣಿಸಿಕೊಳ್ಳಲಿದೆ. ಈಗಾಗ್ಲೆ ಬೆಸಿಲಿನ ಬೇಗೆಯಿಂದ ಬಳಲುತ್ತಿರೋ ಜನ ಇನ್ನೂ ಈ ಕರೆಂಟ್ ಕೂಡ ತೆಗೆದ್ರೆ ಹೇಗಪ್ಪಾ ಇರೋದು ಅಂತಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button