Breaking NewsLatestಮನರಂಜನೆಸಿನಿಮಾಸ್ಯಾಂಡಲ್ ವುಡ್

4 ದಿನದ ಹಸುಗೂಸಿಗೆ ಪುನೀತ್ ಹೆಸರು ನಾಮಕರಣ ಮಾಡಿದ ಶಿವಣ್ಣ

ಇಂದು ನಟ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬದ ಸಂಭ್ರಮ ಮನೆ ಮಾಡಿದೆ. ಈಗಾಗಲೇ ಅಭಿಮಾನಿಗಳು ಸಾಕಷ್ಟು ಸಾಮಾಜಿಕ ಕಾರ್ಯಗಳ ಮೂಲಕ ಅಭಿಮಾನಿಗಳ ಹುಟ್ಟುಹಬ್ಬವನ್ನು ಆಚರಣೆ ಮಾಡುತ್ತಿದ್ದಾರೆ. ವಿಶೇಷವಾಗಿ ಅವರ ಕೊನೆಯ ಸಿನಿಮಾ ಜೇಮ್ಸ್ ರಿಲೀಸ್ ಆಗಿದೆ. ಈಗ ಎಲ್ಲೆಲ್ಲೂ ಜೇಮ್ಸ್ ಹವಾ ಶುರುವಾಗಿದೆ.

ಇನ್ನು ಪುನೀತ್ ಹುಟ್ಟುಹಬ್ಬದ ಪ್ರಯುಕ್ತ ನಿನ್ನೆ ಸ್ಯಾಂಡಲ್‌ವುಡ್ ನಟಿ ತಾರಾ ಐದು ಮಕ್ಕಳಿಗೆ ಪುನೀತ್ ರಾಜ್ ಕುಮಾರ್ ಹೆಸರು ಇಟ್ಟಿದ್ದರು. ಇದೀಗ ಶಿವರಾಜ್ ಕುಮಾರ್ 4 ದಿನದ ಹಸುಗೂಸಿಗೆ ಪುನೀತ್ ಹೆಸರು ನಾಮಕರಣ ಮಾಡಿದ್ದಾರೆ. ಆ ವೇಳೆ ಆ ಮಗುವಿನ ಮಾತನಾಡಿದ ತಾಯಿ, ನನ್ನ ಮಗುವಿನಲ್ಲಿ ಅಪ್ಪು ಸರ್‌ ಕಾಣುತ್ತೇನೆ ಎಂದು ಹೇಳಿದ್ದಾರೆ. ಗಂಡು ಮಗು ಅಂತೆ, ಇದನ್ನೇ ಅಪ್ಪು ಅಂತ ಅಂದುಕೊಳ್ಳೋಣ ಎಂದು ಮಗುವಿಗೆ ಡಾ. ಶಿವರಾಜ್‌ಕುಮಾರ್ ಅವರು ಮಗುವಿಗೆ ನಾಮಕರಣ ಮಾಡಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button