Breaking NewsLatestಉಡುಪಿಕ್ರೈಂಜಿಲ್ಲಾ ಸುದ್ದಿರಾಜ್ಯಸುದ್ದಿ
ಹಿಜಾಬ್ ವಿಚಾರ ಕರ್ನಾಟಕ ಬಂದ್ ಹಿನ್ನೆಲೆ: ಮುಸ್ಲಿಂ ಬಸ್ ಮಾಲೀಕರಿಂದ ಬಂದ್ಗೆ ಬೆಂಬಲ ಇಲ್ಲ

ಉಡುಪಿ: ಹಿಜಾಬ್ ವಿಚಾರವಾಗಿ ಹೈ ಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಮನವಿ ಸಲ್ಲಿಸಲಾಗಿದೆ. ಹೋಳಿ ಹಬ್ಬದ ಬಳಿಕ ಸುಪ್ರೀಂ ಕೋರ್ಟ್ ಪ್ರಕರಣ ಕೈಗೆತ್ತಿಕೊಳ್ಳಲಾಗುತ್ತೆ ಎಂದಿದೆ. ಇತ್ತ ಕರ್ನಾಟಕದಲ್ಲಿ ಇಂದು ಬಂದ್ಗೆ ಕರೆ ನೀಡಲಾಗಿದ್ದು, ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅದೇ ರೀತಿ ಉಡುಪಿಯಲ್ಲು ಕೂಡ ಬಂದ್ ಯಶಸ್ವಿಯಾಗಿಲ್ಲ. ಮುಸ್ಲಿಂ ಬಸ್ ಓನರ್ ಗಳಿಂದ ಬಂದ್ ಗೆ ಬೆಂಬಲ ಸಿಕ್ಕಿಲ್ಲ. ಮುಸ್ಲಿಂ ಸಮುದಾಯದ ಚಾಲಕರು ನಿರ್ವಾಹಕರು ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಸರ್ವಿಸ್ ಮತ್ತು ಸಿಟಿ ಬಸ್ಸುಗಳು ಬೆಳ್ಳಿಗ್ಗೆಯಿಂದ ಓಡಾಡುತ್ತಲೇ ಇವೆ. ಈ ವೇಳೆ ಮಾತನಾಡಿದ ಬಸ್ ಮಾಲೀಕರು ಈಗಾಗಲೇ ನಾವು ಕೊರೊನಾದಿಂದ ಸಂಪೂರ್ಣ ಜರ್ಜರಿತವಾಗಿದ್ದೇವೆ. ಪ್ರಬಲ ಹಿಂದೂ ಸಮಾಜವನ್ನ ನಾವು ಎದುರಾಕಿಕೊಂಡು ಇರೋಕೆ ಆಗಲ್ಲ. ನಾವೆಲ್ಲರೂ ಸಹೋದರರು ಇದ್ದಂತೆ…ಹೀಗಾಗಿ ನಮಗೆ ಯಾವುದೇ ಹೋರಾಟ ಪ್ರತಿಭಟನೆ ಬೇಕಿಲ್ಲ ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
