Breaking NewsLatestಕ್ರೀಡೆರಾಜ್ಯಸುದ್ದಿ
ಬೆಂಗಳೂರಿನ ರಸ್ತೆ ಗುಂಡಿಗೆ ಯುವಕ ಬಲಿ: ಆಪ್ ಮುಖಂಡರನ್ನು ಬಂಧಿಸಿದ ಪೊಲೀಸರು

ಬೆಂಗಳೂರಿನ ಎಂ.ಎಸ್. ಪಾಳ್ಯದಲ್ಲಿ ರಸ್ತೆ ಗುಂಡಿಗೆ ಭಾನುವಾರ ಬಲಿಯಾದ ಅಶ್ವಿನ್ ಕುಟುಂಬಕ್ಕೆ ಒಂದು ಕೋಟಿ ರೂಪಾಯಿ ಪರಿಹಾರ ನೀಡಬೇಕೆಂದು ಆಗ್ರಹಿಸಿ ಆಮ್ ಆದ್ಮಿ ಪಾರ್ಟಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದರು.
ಆಪ್ ಪಕ್ಷದ ಮುಖಂಡರಾದ ಮೋಹನ್ ದಾಸರಿ, ಬಿ.ಟಿ. ನಾಗಣ್ಣ, ಸುರೇಶ್ ರಾಥೋಡ್, ಜಗದೀಶ್ ವಿ. ಸದಂ, ಚೆನ್ನಪ್ಪಗೌಡ ನೆಲ್ಲೂರು, ಸುಹಾಸಿನಿ, ಕುಶಲಸ್ವಾಮಿ, ಸಮೀರ್ ಅಸದ್, ಜಗದೀಶ್ ಬಾಬು , ಶ್ರೀಕಾಂತ್, ಗೋವರ್ಧನ್ ರಾಜು, ಯಾಸೀನ್ ಸೇರಿದಂತೆ 14 ಮಂದಿ ಎಎಪಿ ಮುಖಂಡರನ್ನು ಪೊಲೀಸರು ಬಂಧಿಸಿ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ಪಡೆದರು.
ಆಪ್ ಮುಖಂಡರನ್ನು ಬಂಧಿಸುತ್ತಿದ್ದಂತೆ ಎಎಪಿ ಕಾರ್ಯಕರ್ತರು ವಿದ್ಯಾರಣ್ಯ ಪೊಲೀಸ್ ಠಾಣೆಯ ಮುಂದೆ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಳಿಕ ಬಂಧಿತರನ್ನು ಮ್ಯಾಜಿಸ್ಟೇಟ್ ಮುಂದೆ ಹಾಜರುಪಡಿಸಿ ಹೇಳಿಕೆ ಪಡೆಯಲಾಯಿತು.
