Breaking NewsLatestಕ್ರಿಕೆಟ್ಕ್ರೀಡೆರಾಜ್ಯಸುದ್ದಿ

ಕೊಹ್ಲಿ ಜೊತೆ ಸೆಲ್ಫಿಗಾಗಿ ಸ್ಟೇಡಿಯಂ ಒಳಗೆ ನುಗ್ಗಿದ ಯುವಕರಿಗೆ ಸಂಕಷ್ಟ

ಬೆಂಗಳೂರು: ನಗರದ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾರತ ಹಾಗೂ ಶ್ರೀಲಂಕಾ ನಡುವೆ ಟೆಸ್ಟ್ ಪಂದ್ಯ ಶುರುವಾಗಿದೆ. ಈ ವೇಳೆ ನಾಲ್ವರು ಯುವಕರು ಸ್ಟೇಡಿಯಂ ಒಳಗೆ ನುಗ್ಗಿ, ಹುಚ್ಚಾಟ ನಡೆಸಿದ್ದಾರೆ. ವಿರಾಟ್ ಕೊಹ್ಲಿ ಜೊತೆ ಸೆಲ್ಫಿ ತೆಗೆದುಕೊಳ್ಳಲು ಸ್ಟೇಡಿಯಂ ಒಳಗೇ ನುಗ್ಗಿದ್ದಾರೆ. ಆ ನಾಲ್ವರು ಯುವಕರನ್ನು ಮೈದಾನದ ತುಂಬಾ ಅಟ್ಟಾಡಿಸಿದ ಪೊಲೀಸರು ಕೊನೆಗೂ ಅವರನ್ನು ಹಿಡಿದಿದ್ದಾರೆ. ಇದೀಗ ಅಭಿಮಾನ ತೋರಿದ ನಾಲ್ವರು ಯುವಕರಿಗೆ ಸಂಕಷ್ಟ ಎದುರಾಗಿದೆ.ಈ ನಾಲ್ವರು ಯುವಕರು ಕಲಬುರಗಿ ಮೂಲದವರು ಅಂತ ತಿಳಿದು ಬಂದಿದೆ. ಇವರು ಕೊಹ್ಲಿ ಪಕ್ಕಾ ಅಭಿಮಾನಿಯಾಗಿದ್ದು, ಸೆಲ್ಫಿ ತೆಗೆದುಕೊಂಡು, ಅವರ ಕೈ ಕುಲಕಲೆಂದೇ ಮೈದಾನದೊಳಕ್ಕೆ ನುಗ್ಗಿದ್ದಾರೆ.ಸದ್ಯ ಅವರನ್ನು ಪೊಲೀಸರು ವಶಕ್ಕೆ ಪಡೆದು, ಎಫ್ ಐಆರ್ ದಾಖಲಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button