Breaking NewsLatestಬಾಲಿವುಡ್ಮನರಂಜನೆಸಿನಿಮಾಸೆಲೆಬ್ರಿಟಿಸ್ಯಾಂಡಲ್ ವುಡ್
ಉದ್ಯಮಿ ಪತ್ನಿಯ ಜೊತೆ ಸೆಕ್ಸ್ ಎಂಜಾಯ್ ಮಾಡಿದ್ದೆ: ವಿವಾದ ಸೃಷ್ಟಿಸಿದ ಪ್ರಿಯಾಂಕಾ ವಾದ್ರಾ ಅಳಿಯನ ಹೇಳಿಕೆ

ಹಿಂದಿ ಕಿರುತೆರೆಯ ರಿಯಾಲಿಟಿ ಶೋ ಒಂದರ ಸ್ಪರ್ಧಿಯಾಗಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕ ವಾದ್ರಾ ಅಳಿಯ ತಹಸೀನ್ ಪೂನಾವಾಲ ಹಿಂದೊಮ್ಮೆ ಉದ್ಯಮಿಯ ಪತ್ನಿ ಜೊತೆ ಸೆಕ್ಸ್ ಎಂಜಾಯ್ ಮಾಡಿರುವುದಾಗಿ ಹೇಳಿಕೆ ನೀಡಿ ವಿವಾದಕ್ಕೆ ಎಡೆ ಮಾಡಿಕೊಟ್ಟಿದ್ದಾರೆ.
ನಟಿ ಕಂಗನಾ ರಾಣವತ್ ನಡೆಸಿಕೊಡುವ ಲಾಕ್ ಅಪ್ ರಿಯಾಲಿಟಿ ಶೋನಲ್ಲಿ ತಹಸೀನ್ ಭಾಗಿಯಾಗಿದ್ದರು. ಆದರೆ ತಹಸೀನ್ ಶೋನಿಂದ ಎಲಿಮಿನೇಟ್ ಆಗಿದ್ದು ಹೊರ ಹೋಗುವ ಮುನ್ನ ಇದುವರೆಗೂ ಯಾರಿಗೂ ಹೇಳದ ಸೀಕ್ರೆಟ್ ಹೇಳಿ ಎಂದು ನಿರೂಪಕರು ಕೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ತಹಸೀನ್ ನಾನು ಹಿಂದೊಮ್ಮೆ ಖ್ಯಾತ ಉದ್ಯಮಿಯ ಪತ್ನಿ ಜೊತೆ ಸೆಕ್ಸ್ ಎಂಜಾಯ್ ಮಾಡಿದ್ದೆ ಎಂದು ಹೇಳಿದ್ದಾರೆ. ಇದೀಗ ತಹಸೀನ್ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
