Breaking Newsಜಿಲ್ಲಾ ಸುದ್ದಿತುಮಕೂರುರಾಜ್ಯಸುದ್ದಿ

17 ವರ್ಷದ ಬಾಲಕಿ ಕಿಡ್ನ್ಯಾಪ್ ಪ್ರಕರಣ: ಅಮ್ಮನ ಕಿರಿಕಿರಿಗೆ ಬೇಸತ್ತು ಮಗಳೇ ಆಡಿದ್ಲು ಕಿಡ್ನ್ಯಾಪ್ ನಾಟಕ!

ತುಮಕೂರು: ತಾಯಿ ಎದುರೇ 17 ವರ್ಷದ ಮಗಳನ್ನು ಅಪಹರಣ ಮಾಡಿದ್ದ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಪುರದಹಳ್ಳಿ ಗ್ರಾಮದಲ್ಲಿ ನಡೆದಿತ್ತು. ಬಾಗಿಲು ಮುರಿದು ಮನೆಗೆ ನುಗ್ಗಿ ಬಾಲಕಿಯನ್ನು ಕಿಡ್ನ್ಯಾಪ್ ಮಾಡಿದ್ರು. ಪೋಷಕರು ಮಲಗಿದ್ದಾಗ ಬಾಗಿಲು ಬಡಿದು ಒಳಗೆ ನುಗ್ಗಿದ್ದ ಕಿಡ್ನ್ಯಾಪರ್ಸ್ ನಂತರ ಬಾಲಕಿಯನ್ನ ಬೈಕ್​ನಲ್ಲಿ ಕೂರಿಸಿಕೊಂಡು ಎಸ್ಕೇಪ್ ಆಗಿದ್ರು. ಈ ಸಂಬಂಧ ಕೋಳಾಲ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿತ್ತು.

ಇದೀಗ ಬಾಲಕಿ ಅಪಹರಣ ಪ್ರಕರಣ ಸುಖಾಂತ್ಯ ಕಂಡಿದೆ.  ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಪುರದಹಳ್ಳಿಯ 17 ವರ್ಷದ ಬಾಲಕಿಯ ಪತ್ತೆಗೆ ಇಳಿದ ಪೊಲೀಸರಿಗೆ ಆಕೆ ಪತ್ತೆಯಾಗಿದ್ಲು. ಕಿಡ್ನ್ಯಾಪ್ ಕಥೆ ಏನು ಅಂತ ಕೆದಕಿದಾಗ ತಾಯಿ ಕಿರಿಕಿರಿ ತಾಳಲಾರದೆ ಕಿಡ್ನಾಪ್ ಡ್ರಾಮ ಮಾಡಿದ್ದಾಳೆ ಎನ್ನಲಾಗಿದೆ. ಪೊಲೀಸರ ಮುಂದೆ ತಾಯಿ ಜೊತೆ ಹೋಗಲು ಹಿಂದೇಟು ಹಾಕಿದ ಹಿನ್ನೆಲೆ ಬಾಲಕಿಯನ್ನ ತುಮಕೂರು ಬಾಲ ಮಂದಿರದಲ್ಲಿ ಬಿಡಲಾಗಿದೆ. ಕಿಡ್ನಾಪ್ ಮಾಡಲಾಗಿದೆ ಎಂಬ ಯುವಕರು ಇನ್ನೂ ಪತ್ತೆಯಾಗಿಲ್ಲ.

Spread the love

Related Articles

Leave a Reply

Your email address will not be published. Required fields are marked *

Back to top button