Breaking NewsLatestಮನರಂಜನೆಸಿನಿಮಾಸೆಲೆಬ್ರಿಟಿಸ್ಯಾಂಡಲ್ ವುಡ್

ಪುನೀತ್ ಇಲ್ಲದೆ ಜೇಮ್ಸ್ ಕಾರ್ಯಕ್ರಮ ಮಾಡುವುದು ದುಃಖದ ವಿಚಾರ: ನಟಿ ಪ್ರಿಯಾ ಆನಂದ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಜೇಮ್ಸ್ ಸಿನಿಮಾ ಇದೇ ಮಾರ್ಚ್ 17ರಂದು ಪುನೀತ್ ಹುಟ್ಟುಹಬ್ಬದ ಪ್ರಯುಕ್ತ ರಿಲೀಸ್ ಆಗ್ತಿದೆ. ಜೇಮ್ಸ್ ಸಿನಿಮಾದ ಪ್ರಿರಿಲೀಸ್ ಕಾರ್ಯಕ್ರವನ್ನ ಸಾಕಷ್ಟು ಅದ್ದೂರಿಯಾಗಿ ಚಿತ್ರತಂಡ ಆಯೋಜಿಸಿದ್ದು ಸುಮಾರು 5000ಕ್ಕೂ ಅಧಿಕ ಮಂದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ನಟ ಪುನೀತ್ ರನ್ನ ನೆನಪು ಮಾಡಿಕೊಂಡು ನಟಿ ಪ್ರಿಯಾ ಆನಂದ್ ಕಣ್ಣೀರು ಹಾಕಿದ್ರು.

ರಾಜಕುಮಾರ ಚಿತ್ರದ ಬಳಿಕ ಪುನೀತ್ ರಾಜ್ ಕುಮಾರ್ ಜೊತೆ ಜೇಮ್ಸ್ ಸಿನಿಮಾದಲ್ಲಿ ನಟಿ ಪ್ರಿಯಾ ಆನಂದ್ ಎರಡನೇ ಬಾರಿ ಸ್ಕ್ರೀನ್ ಶೇರ್ ಮಾಡಿದ್ದಾರೆ. ಚಿತ್ರದ ಪ್ರಿರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಿಯಾ ಆನಂದ್ “ಅಪ್ಪು ನಟನೆಯ ಚಿತ್ರವನ್ನ ವಿಶ್ವದೆಲ್ಲೆಡೆ ಜನರು ಬೆಳ್ಳಿ ತೆರೆಯಲ್ಲಿ ಕಣ್ಮುಂಬಿಕೊಳ್ಳಲು ಕಾದಿದ್ದಾರೆ. ಇದೇ ಕಾರಣದಿಂದ ಇಷ್ಟೊಂದು ಸ್ಕ್ರೀನ್ ಗಳಲ್ಲಿ ಜೇಮ್ಸ್ ಸಿನಿಮಾ ಪ್ರದರ್ಶನವಾಗುತ್ತಿದೆ ಎಂದಿದ್ದಾರೆ.

ಜೇಮ್ಸ್ ಸಿನಿಮಾವನ್ನ ಪೂರ್ತಿಯಾಗಿ ನೋಡಿಲ್ಲ. ಆದರೆ ದೃಶ್ಯಗಳಲ್ಲಿ ಪುನೀತ್ ರನ್ನ ನೋಡುವಾಗ ಮನಸ್ಸು ಭಾರವಾಗುತ್ತದೆ ಎಂದರು. ಪುನೀತ್ ಅವರು ಹೃದಯದಿಂದ ನಗುತ್ತಿದ್ದರು. ಅದು ಪ್ರತಿಯೊಬ್ಬರಿಗೂ ಕನೆಕ್ಟ್ ಆಗುತ್ತಿತ್ತು. ಅವರು ಸಣ್ಣ ವಯಸ್ಸಿನಿಂದ ಇಲ್ಲಿಯವರೆಗೆ ನಗುತ್ತಲೇ ಇದ್ದರು. ಎಲ್ಲರನ್ನೂ ರಂಜಿಸುತ್ತಾ ಇದ್ದರು. ಆದರೆ ಜೇಮ್ಸ್ ಸಿನಿಮಾದ ಪ್ರಿ ರಿಲೀಸ್ ಈವೇಂಟ್ ನಲ್ಲಿ ಅವರಿಲ್ಲ. ಪುನೀತ್ ಇಲ್ಲದೇ ಹೀಗೆ ಸಮಾರಂಭ ಮಾಡುವುದು ಬಹಳ ದುಃಖಕರ ವಿಚಾರ ಎಂದರು.

ಮಾರ್ಚ್ 17ರಂದು ಜೇಮ್ಸ್ ಸಿನಿಮಾ ರಿಲೀಸ್ ಆಗ್ತಿದ್ದು ಅದಕ್ಕಾಗಿ ಅಭಿಮಾನಿಗಳು ಭರ್ಜರಿ ತಯಾರಿ ಮಾಡಿಕೊಂಡಿದ್ದಾರೆ. ಈಗಾಗ್ಲೆ ಚಿತ್ರದ ಪ್ರಿ ಬುಕಿಂಗ್ ಓಪನ್ ಆಗಿದ್ದು ಸಾಕಷ್ಟು ಮಂದಿ ಟಿಕೇಟ್ ಬುಕ್ ಮಾಡಿದ್ದಾರೆ. ಅಲ್ಲದೆ ಥಿಯೇಟರ್ ಮುಂದೆ ಈಗಾಗ್ಲೆ ದೊಡ್ಡ ದೊಡ್ಡ ಕಟೌಟ್ ಗಳನ್ನ ಹಾಕಲಾಗಿದ್ದು ಜೇಮ್ಸ್ ಸ್ವಾಗತಕ್ಕೆ ಭರ್ಜರಿ ವೇದಿಕೆ ಸಿದ್ದವಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button