Breaking NewsLatestಜಿಲ್ಲಾ ಸುದ್ದಿಮಂಡ್ಯರಾಜ್ಯಸುದ್ದಿ

ಮಾಜಿ ಸಿಎಂ ಕುಮಾರಸ್ವಾಮಿಗೆ ಜೋಡೆತ್ತಿನ ಗಿಫ್ಟ್!

ಮಂಡ್ಯ: ದನಗಳ ಜಾತ್ರೆಯನ್ನು ಉದ್ಘಾಟಿಸಲು ಬಂದಂತ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಗೆ,  ಅಭಿಮಾನಿಯೊಬ್ಬ, ಹಳ್ಳಿಕಾರ್ ತಳಿಯ ಜೋಡೆತ್ತುಗಳನ್ನು ಗಿಫ್ಟ್ ಆಗಿ ನೀಡಿದ್ದಾನೆ. ಆದ್ರೇ.. ಅವುಗಳ ಬೆಲೆಯನ್ನು ಕೇಳಿ ಕುಮಾರಸ್ವಾಮಿ ಕೂಡ ಶಾಕ್ ಆಗಿದ್ದಾರೆ. ಹಾಗಾದ್ರೇ ಅವುಗಳ ಬೆಲೆ ಎಷ್ಟು..?

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಚೊಟ್ಟನಹಳ್ಳಿ ಗ್ರಾಮದಲ್ಲಿನ ದನಗಳ ಜಾತ್ರೆಯನ್ನು ಮಾಜಿ ಸಿಎಂ ಕುಮಾರಸ್ವಾಮಿ ಉದ್ಘಾಟಿಸಿದರು. ಈ ಉದ್ಘಾಟನಾ ಕಾರ್ಯಕ್ರಮಕ್ಕೆ ಬಂದ ಅವರಿಗೆ, ಕೋಣಸಾಲೆ ಗ್ರಾಮದ ಮಧುಸೂದನ್ ಎಂಬ ಅಭಿಮಾನಿ, ಹಳ್ಳಿಕಾರ್ ತಳಿಯ ಜೋಡೆತ್ತುಗಳನ್ನೇ ಉಡುಗೋರೆಯಾಗಿ ನೀಡಿದ್ದಾನೆ.

ಅಂದಹಾಗೇ ಮಧುಸೂದನ್ ಅವರು ನೀಡಿದಂತ ಹಳ್ಳಿಕಾರ್ ತಳಿಯ ಜೋಡೆತ್ತುಗಳ ಬೆಲೆ ಬರೋಬ್ಬರಿ 1.80 ಲಕ್ಷದ್ದವಾಗಿವೆ. ಅಭಿಮಾನಿ ಕೊಟ್ಟಂತ ಎತ್ತುಗಳನ್ನು ಸಂತೋಷದಿಂದ ಸ್ವೀಕರಿಸಿದ ಕುಮಾರಸ್ವಾಮಿ, ತಾವು ತಮ್ಮ ತೋಟದ ಮನೆಯಲ್ಲಿ ಸಾಕೋದಾಗಿ ಹೇಳಿದರು.

ಇನ್ನು ಕುಮಾರಸ್ವಾಮಿ ಸಿಎಂ ಆಗಿದ್ದಾಗ ರೈತರಿಗೆ ರೈತರ ಸಾಲಮನ್ನಾ ಸೇರಿದಂತೆ ಹಲವು ಸವಲತ್ತು ಒದಗಿಸಿದ್ದರು. ರೈತಾಪಿ ವರ್ಗಕ್ಕೆ ಹಲವು ಸವಲತ್ತು ನೀಡಿದ್ದ ಮಾಜಿ ಸಿಎಂ ಹೆಚ್‌ಡಿಕೆ ಬಗ್ಗೆ ಗ್ರಾಮಸ್ಥರಿಗೆ ಅಭಿಮಾನವಿದೆ. ಹೀಗಾಗಿಯೇ ಮತ್ತೊಮ್ಮೆ ರೈತಬಂಧು, ರೈತನಾಯಕ ಕುಮಾರಣ್ಣ ಅಧಿಕಾರಕ್ಕೆ ಬರಬೇಕು ಎಂದು ಗ್ರಾಮಸ್ಥರು ದೇವರುಗಳಿಗೆ ಹರಕೆಯನ್ನೂ ಹೊತ್ತಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button