Breaking NewsLatestಕ್ರೈಂರಾಜ್ಯಸುದ್ದಿ
ಬೈಕ್ ಸವಾರನಿಗೆ ಕಪಾಳ ಮೋಕ್ಷ: ಎಸ್ ಐಗೆ ಸಮನ್ಸ್ ಜಾರಿ!

ನೆಲ್ಲೂರು: ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಮರ್ರಿಪಾಡು ಮಂಡಲದ ಗ್ರಾಮದ ಬಳಿ ಪೊಲೀಸರು ಹೆಲ್ಮೆಟ್ ಇಲ್ಲದೆ, ಲೈಸೆನ್ಸ್ ಇಲ್ಲದೆ ಸವಾರಿ ಮಾಡೋ ಬೈಕರ್ಸ್ ಬೇಟೆಗೆ ನಿಂತಿದ್ರು. ಇದೇ ಸಮಯಕ್ಕೆ ಓರ್ವ ಬೈಕ್ ಸವಾರನನ್ನ ತಡೆದು ಹೆಲ್ಮೆಟ್ ಎಲ್ಲಿ ಅಂದಿದ್ದಾನೆ. ಬೈಕ್ ಸವಾರನ ಬಳಿ ಹೆಲ್ಮೆಟ್ ಲೈಸೆನ್ಸ್ ಯಾವುದು ಇಲ್ಲವಾದ ಕಾರಣ ಆತನಿಗೆ ದಂಡ ಕಟ್ಟುವಂತೆ ತಿಳಿಸಿದ್ದಾರೆ.
ಆದ್ರೆ ದಂಡವನ್ನ ಪಾವತಿಸಲು ಆತ ನಿರಾಕರಿಸಿದ್ದೇ ತಡ ಗಬ್ಬರ್ ಸಿಂಗ್ ಎಂದು ಸ್ಥಳೀಯವಾಗಿ ಕರೆಸಿಕೊಂಡಿರುವ ಎಸ್ ಐ ವೆಂಕಟರಮಣ ಮೋಟಾರ್ ಸೈಕಲ್ ಸವಾರನಿಗೆ ಥಳಿಸಿದ್ದಾರೆ. ಇದನ್ನ ಅಲ್ಲೆ ಇದ್ದವರ್ಯಾರೋ ಸೋಶಿಯಲ್ ಮೀಡಿಯದಲ್ಲಿ ಅಪ್ ಲೋಡ್ ಮಾಡಿದ್ದಾರೆ. ಆ ವಿಡಿಯೋ ವೈರಲ್ ಆಗಿದೆ.
ಅದ್ಯಾವಾಗ ಘಟನೆಯ ವಿಡಿಯೋ ವೈರಲ್ ಆಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಜಯರ್ ರಾವ್ ರ ಗಮನಕ್ಕೆ ಕೂಡಲೇ ಮರ್ರಿಪಾಡು ಮಂಡಲ ವ್ಯಾಪ್ತಿಯ ಡಿಎಸ್ ಪಿಯವರಿಗೆ ಘಟನೆ ಕುರಿತಂತೆ ವರದಿ ನೀಡಲು ಕೋರಿ ಎಸ್ ಐ ವೆಂಕಟರಮಣರಿಗೆ ಇಲಾಖೆ ತನಿಖೆಗೆ ಆದೇಶ ಹೊರಡಿಸಿ ಸಮನ್ಸ್ ಜಾರಿ ಮಾಡಿದ್ದಾರೆ.
