Breaking NewsLatestಕ್ರಿಕೆಟ್ಕ್ರೀಡೆ

ತಾಯ್ನಾಡಿಗೆ ತಲುಪಿದ ವಾರ್ನ್ ಪಾರ್ಥೀವ ಶರೀರ: ಎಂಸಿಜಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಅಂತಿಮ ದರ್ಶನ

ಥಾಯ್ಲಾಂಡ್ ನಲ್ಲಿ ಹೃದಯಾಘಾತದಿಂದ ಮೃತಪಟ್ಟ ಕ್ರಿಕೆಟ್ ದಿಗ್ಗಜ ಶೇನ್ ವಾರ್ನ್ ಪಾರ್ಥೀವ ಶರೀರವನ್ನು ತಾಯ್ನಾಡಿಗೆ ಕರೆದೊಯ್ಯಲಾಗಿದೆ. ಪ್ರೈವೇಟ್ ಜೆಟ್ ಮೂಲಕ ಆಸ್ಟ್ರೇಲಿಯಾದ ಮೆಲ್ಬೋರ್ನ್ ನಲ್ಲಿರುವ ಶೇನ್ ವಾರ್ನ್ ನಿವಾಸಕ್ಕೆ ಮೃತದೇಹವನ್ನ ರವಾನಿಸಲಾಗಿದೆ. ವಾರ್ನ್ ನಿಧನ ಹೊಂದಿದ ಆರು ದಿನಗಳ ಬಳಿಕ ಆಸ್ಟ್ರೇಲಿಯಾಗೆ ವಾರ್ನ್ ಮೃತದೇಹವನ್ನ ತೆಗೆದುಕೊಂಡು ಹೋಗಲಾಗಿದೆ.

ಮೆಲ್ಬೋರ್ನ್ ನ ಎಂಸಿಜಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಾರ್ಥೀವ ಶರೀರವನ್ನ ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತೆ. ಬಳಿಕ ಸಾರ್ವಜನಿಕವಾಗಿ ವಾರ್ನ್ ಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಸುಮಾರು 1 ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ.

Spread the love

Related Articles

Leave a Reply

Your email address will not be published. Required fields are marked *

Back to top button