Breaking NewsLatestಆಹಾರಲೈಫ್ ಸ್ಟೈಲ್

ಮನೆಯಲ್ಲೇ ಸುಲಭವಾಗಿ ಮಟನ್ ಗ್ರೇವಿ ತಯಾರು ಮಾಡಿ

ಮಾಂಸಾಪ್ರಿಯರಿಗೆ ರುಚಿ ರುಚಿಯಾದ ಅಡುಗೆ ಮಾಡಿಕೊಟ್ಟರೆ ಯಾರಿಗೆ ತಾನೆ ಇಷ್ಟವಾಗಲ್ಲ ಹೇಳಿ. ಕೆಲ ಮಾಂಸಾಹಾರ ಅಂದರೆ ಸಾಕು ಬಾಯಲಿ ನೀರು ಬರುತ್ತದೆ. ಮನೆಯಲ್ಲಿ ಸುಲಭವಾಗಿ ಮಟನ್ ಗ್ರೇವಿ ತಯಾರು ಮಾಡಿ.


ಬೇಕಾಗುವ ಸಾಮಗ್ರಿಗಳು:
ಮಟನ್- 1 ಕೆಜಿ
ಕೊತ್ತಂಬರಿ ಸೊಪ್ಪು – ಸ್ವಲ್ಪ
ಹಸಿ ಮೆಣಸಿನಕಾಯಿ- 3
ಈರುಳ್ಳಿ- 1
ಶುಂಠಿ-ಬೆಳ್ಳುಳ್ಳಿ- ಪೇಸ್ಟ್
ಗೋಡಂಬಿ- 6-7
ಚಕ್ಕೆ-1
ಜೀರಿಗೆ ಪುಡಿ- 1 ಚಮಚ
ದನಿಯಾ ಪೌಡರ್-2 ಚಮಚ
ರುಚಿಗೆ ತಕ್ಕ ಉಪ್ಪು-
ಎಣ್ಣೆ ಅರ್ಧ ಕಪ್

ಮಾಡುವ ವಿಧಾನ:
ಕೊತ್ತಂಬರಿ ಸೊಪ್ಪು, ಹಸಿ ಮೆಣಸಿನಕಾಯಿ, ಈರುಳ್ಳಿ, ಗೋಡಂಬಿ, ಚಕ್ಕೆ, ಲವಂಗ, ಕರಿ ಮೆಣಸು ಹಾಕಿ ಪೇಸ್ಟ್ ಮಾಡಿಕೊಳ್ಳಿ.ಪಾತ್ರೆಯಲ್ಲಿ ಅಡುಗೆ ಎಣ್ಣೆ ಹಾಕಿ ಬಿಸಿ ಮಾಡಿ, ಈಗಾಗಲೇ ತಯಾರು ಮಾಡಿದ ಮಿಶ್ರಣದ ಪೇಸ್ಟ್ ಹಾಕಿ ಚೆನ್ನಾಗಿ ಬೇಯಿಸಬೇಕು.ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಜೀರಿಗೆ, ದನಿಯಾ ಪೌಡರ್, ಜೀರಿಗೆ ಪುಡಿ ಹಾಗೂ ರುಬ್ಬಿದ ಕೊತ್ತಂಬರಿ ಸೊಪ್ಪಿನ ಪೇಸ್ಟ್ ಹಾಕಿ ಸ್ವಲ್ಪ ಬೇಯಿಸಿಕೊಳ್ಳಿ.ನೀರು ಹಾಕಿ, ರುಚಿಗೆ ತಕ್ಕ ಉಪ್ಪು ಸೇರಿಸಿ ಮಟನ್ ಹಾಕಿ ಪಾತ್ರೆಯ ಬಾಯಿ ಮುಚ್ಚಿ ಅರ್ಧ ಗಂಟೆ ಬೇಯಿಸಿದರೆ ರುಚಿಯಾದ ಹರಿಯಾಲಿ ಮಟನ್ ಸವಿಯಲು ಸಿದ್ಧವಾಗುತ್ತದೆ.

Spread the love

Related Articles

Leave a Reply

Your email address will not be published. Required fields are marked *

Back to top button