ಮಾ.11ಕ್ಕೆ ರಿಯಲ್ ಸ್ಟಾರ್ ಉಪೇಂದ್ರ ಕಡೆಯಿಂದ ಹೊಸ ಅಪ್ ಡೇಟ್

ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ ಸಿನಿಮಾ ಅಂದರೆ ಯಾರಿಗೆ ಇಷ್ಟವಾಗುವುದಿಲ್ಲ ಹೇಳಿ. ಈಗಾಗಲೇ ಅವರು ಸಾಕಷ್ಟು ಸಿನಿಮಾ ನಿರ್ದೇಶನ ಮಾಡಿ ಹಿಟ್ ಕೊಟ್ಟಿದ್ದಾರೆ. ಮೊದಲು ಅವರು ನಿರ್ದೇಶನದಲ್ಲೇ ತೊಡಗಿಕೊಂಡಿದ್ದರು. ನಂತರ ಹೀರೋ ಆಗಿ ಹೊರಹೊಮ್ಮಿದ್ದರು. ನಟನೆಯಲ್ಲೇ ಬ್ಯುಸಿ ಆದ ಅವರು ಮಧ್ಯೆ ಮಧ್ಯೆ ಸಿನಿಮಾ ನಿರ್ದೇಶನ ಮಾಡುತ್ತಾರೆ. ಇದೀಗ ಅವರು ಮತ್ತೆ ಡೈರಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಇದರಿಂದ ಅಭಿಮಾನಿಗಳಿಗೆ ಬಹಳ ಖುಷಿ ಕೊಟ್ಟಿದೆ.
ಇನ್ನು ಮಾರ್ಚ್ 11ರ ದಿನಾಂಕವನ್ನು ಸೇವ್ ಮಾಡಿಕೊಳ್ಳಿ ಎಂದು ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.ಈ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಅಂದು ಮಧ್ಯಾಹ್ನ 12.46ಕ್ಕೆ ಅವರಿಂದ ವಿಶೇಷ ಅಪ್ಡೇಟ್ ಸಿಗಲಿದೆ.
ಅಂದಹಾಗೆ ಗಾಂಧಿನಗರದಲ್ಲಿ ಉಪೇಂದ್ರ ನಿರ್ದೇಶನ ಕುರಿತು ಗುಸುಪಿಸು ಕೇಳಿಬರುತ್ತಿತ್ತು. ಕನ್ನಡ ಚಿತ್ರರಂಗದ ಎರಡು ಖ್ಯಾತ ನಿರ್ಮಾಣ ಸಂಸ್ಥೆಗಳು ಜೊತೆಯಾಗಿ ಈ ಸಿನಿಮಾಗೆ ಬಂಡವಾಳ ಹೂಡಲಿವೆ ಎಂಬ ಮಾಹಿತಿ ಸಿಕ್ಕಿದೆ. ಆದರೆ ಈ ಬಗ್ಗೆ ಇನ್ನಷ್ಟೇ ಅಧಿಕೃತ ಘೋಷಣೆ ಆಗಬೇಕಿದೆ. ಯುವ ಸಂಗೀತ ನಿರ್ದೇಶಕರೊಬ್ಬರು ಸಂಗೀತ ಸಂಯೋಜನೆ ಮಾಡಲಿದ್ದು, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಚಿತ್ರ ಸಿದ್ಧವಾಗಲಿದೆ ಎಂದು ಹೇಳಲಾಗಿದೆ.
