Breaking NewsLatestವಿದೇಶಸುದ್ದಿ
Russian Oil Imports: ರಷ್ಯಾದ ತೈಲ ಆಮದಿಗೆ ನಿಷೇಧ ಘೋಷಿಸಿದ ಅಮೆರಿಕ

ವಾಷಿಂಗ್ಟನ್: ರಷ್ಯಾ ಉಕ್ರೇನ್ ಮೇಲೆ ಯುದ್ಧವನ್ನು ಮುಂದುವರೆಸಿದೆ. ರಷ್ಯಾ ಸೇನೆ ಉಕ್ರೇನ್ ಮೇಲೆ ಯುದ್ಧ ಘೋಷಿಸಿ, ಇಂದಿಗೆ 13ನೇ ದಿನಕ್ಕೆ ಕಾಲಿಟ್ಟಿದೆ. ಈ ಸಂದರ್ಭದಲ್ಲಿಯೇ ಅಮೇರಿಕಾ ಅಧ್ಯಕ್ಷ ಜೋ ಬೈಡನ್, ರಷ್ಯಾ ತೈಲ ಆಮದಿಗೆ ನಿಷೇಧ ಹೇರುವ ಮೂಲಕ ರಷ್ಯಾಕ್ಕೆ ಬಿಗ್ ಶಾಕ್ ನೀಡಿದ್ದಾರೆ.
ರಷ್ಯಾ ವಿರುದ್ಧದ ಅಂತಾರಾಷ್ಟ್ರೀಯ ನಿರ್ಬಂಧಗಳ ಭಾಗವಾಗಿ ಇನ್ನೂ 32 ರಷ್ಯನ್ ಮತ್ತು ಬೆಲರೂಸಿಯನ್ ವ್ಯಕ್ತಿಗಳ ಆಸ್ತಿಯನ್ನು ಅಮಾನತುಗೊಳಿಸಲಾಗಿದೆ ಎಂದು ಜಪಾನ್ ಹೇಳಿದೆ.
ಅಲ್ಲದೆ, ಜಪಾನಿನ ಅಧಿಕಾರಿಗಳು ರಷ್ಯಾಕ್ಕೆ ತೈಲ ಸಂಸ್ಕರಣಾ ಸಾಧನಗಳ ರಫ್ತು ಮತ್ತು ಬೆಲಾರಸ್ಗೆ ಸಾಮಾನ್ಯ ಉದ್ದೇಶದ ಸರಕುಗಳನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದೆ.
ಈ ಕುರಿತಂತೆ ಶ್ವೇತಭವನ ಮಾಹಿತಿ ಬಿಡುಗಡೆ ಮಾಡಿದ್ದು, ಉಕ್ರೇನ್ ಮೇಲಿನ ಅಪ್ರಚೋದಿತ, ಅಸಮರ್ಥನೀಯ ಯುದ್ಧಕ್ಕೆ ರಷ್ಯಾವನ್ನು ಹೊಣೆಗಾರರನ್ನಾಗಿ ಮಾಡುವ ಕ್ರಮವಾಗಿ, ಈಗ ರಷ್ಯಾದ ತೈಲ ಆಮದಿಗೆ ನಿಷೇಧಸಿದೆ ಎಂದು ತಿಳಿಸಿದೆ.
