Radhika Pandith: ಸ್ಯಾಂಡಲ್ವುಡ್ ಸಿಂಡ್ರೆಲಾಗೆ ಹುಟ್ಟುಹಬ್ಬದ ಸಂಭ್ರಮ

ಸ್ಯಾಂಡಲ್ವುಡ್ ಸಿಂಡ್ರೆಲಾ ನಟಿ ರಾಧಿಕಾ ಪಂಡಿತ್ ಇಂದು (ಮಾ.7) 38ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಸಾಕಷ್ಟು ಅಭಿಮಾನಿಗಳನ್ನ ಹೊಂದಿರುವ ರಾಧಿಕಾಗೆ ಸಿನಿ ಸೆಲೆಬ್ರಿಟಿಗಳು, ಫ್ಯಾನ್ಸ್ ಸೇರಿದಂತೆ ಸಾಕಷ್ಟು ಮಂದಿ ಶುಭಾ ಹಾರೈಸಿದ್ದಾರೆ.

2008ರಲ್ಲಿ ತೆರೆ ಕಂಡ ‘ಮೊಗ್ಗಿನ ಮನಸು’ ಸಿನಿಮಾದ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿಕೊಟ್ಟ ರಾಧಿಕಾ ಪಂಡಿತ್ ಮೊದಲ ಸಿನಿಮಾದಲ್ಲೇ ಭರ್ಜರಿ ಯಶಸ್ಸು ಘಳಿಸಿದರು. ಅದಕ್ಕೂ ಮೊದಲು ಕೆಲ ಧಾರವಾಹಿಗಳಿಗೆ ರಾಧಿಕಾ ಪಂಡಿತ್ ಬಣ್ಣ ಹಚ್ಚಿದ್ದರು.

ಮೊಗ್ಗಿನ ಮನಸು ಸಿನಿಮಾದ ಬಳಿಕ ಸಾಕಷ್ಟು ಸ್ಟಾರ್ ನಟರ ಸಿನಿಮಾಗಳಿಗೆ ರಾಧಿಕಾ ಪಂಡಿತ್ ಬಣ್ಣ ಹಚ್ಚಿದರು. ಪುನೀತ್ ರಾಜ್ಕುಮಾರ್, ಅಜಯ್ ರಾವ್, ಧ್ರುವ ಸರ್ಜಾ ಸೇರಿದಂತೆ ಸಾಕಷ್ಟು ಕಲಾವಿಧರ ಜೊತೆ ರಾಧಿಕಾ ಪಂಡಿತ್ ಸ್ಕ್ರೀನ್ ಶೇರ್ ಮಾಡಿದ್ದಾರೆ.

2016ರಲ್ಲಿ ತೆರೆಕಂಡು ಸಂತು ಸ್ಟ್ರೈಟ್ ಫಾರ್ವರ್ಡ್ ಬಳಿಕ ಯಶ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ರಾಧಿಕಾ ಪಂಡಿತ್ ಬಳಿಕ ಸಿನಿಮಾ ರಂಗದಿಂದ ಸಣ್ಣ ಬ್ರೇಕ್ ಪಡೆದುಕೊಂಡರು. 2019ರಲ್ಲಿ ತೆರೆಗೆ ಬಂದ ಆದಿ ಲಕ್ಷ್ಮೀ ಪುರಾಣ ಸಿನಿಮಾದ ಮೂಲಕ ಕಂಬ್ಯಾಕ್ ಮಾಡಿದ ರಾಧಿಕಾ ಬಳಿಕ ಯಾವುದೇ ಸಿನಿಮಾ ಒಪ್ಪಿಕೊಳ್ಳಲಿಲ್ಲ.

ಎರಡು ಮುದ್ದಿನ ಮಕ್ಕಳ ತಾಯಿಯಾಗಿರೋ ರಾಧಿಕಾ ಪಂಡಿತ್ ಮಕ್ಕಳ ಲಾಲನೆ ಪಾಲನೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ರಾಧಿಕಾ ಮತ್ತೆ ಸಿನಿಮಾ ರಂಗಕ್ಕೆ ಮರಳಲ್ಲಿ ಅನ್ನೋದು ಅವ್ರ ಲಕ್ಷಾಂತರ ಅಭಿಮಾನಿಗಳ ಆಶಯ.

