Breaking NewsLatestಕಲಬುರ್ಗಿಜಿಲ್ಲಾ ಸುದ್ದಿ

ವಿಧಾನಸಭೆ ಚುನಾವಣೆಗೆ ಜೆಡಿಎಸ್ ರಣಕಹಳೆ: ಅಫಜಲಪುರನಲ್ಲಿ ಬೃಹತ್ ಯಾತ್ರೆ

ಕಲಬುರಗಿ:ಸರ್ಕಾರದ ಅವಧಿ ಇನ್ನೆಷ್ಟು ದಿನ‌ ಇನ್ನೇನು ಮುಗುದೇ ಹೋಯ್ತಾ ಇನ್ನೇನಿದ್ರು ಚುನಾವಣೆ ಪ್ರಚಾರ ಶುರುಯವಾಯ್ತಾ ಹೌದು ಇಂಥದ್ದೊಂದು ಅನುಮಾನ ಮೂಡೋದಕ್ಕೆ ಕಲಬುರ್ಗಿಯ ಆಪಜಲಪುರ ಪಟ್ಟಣ ಸಾಕ್ಷಿಯಾಗಿದೆ. ಭಾನುವಾರ ನಡೆದ ಜೆಡಿಎಸ್ ಸಂಕಲ್ಪ ಸಮಾವೇಶ ಮುಂದಿನ ಚುನಾವಣೆಗೆ ಮಾಜಿ ಸಿ ಎಂ ಕುಮಾರಸ್ವಾಮಿ‌ ಚುನಾವಣಾ ರಣಕಹಳೆಯನ್ನ ಊದಿದ್ದಾರೆ.

ಹೌದು, ಕಲಬುರ್ಗಿಯ ಅಫಜಲಪುರ ಪಟ್ಟಣ ಅಕ್ಷರಸಹ ಮದುವಣಗುತ್ತಿಯಂತೆ ಸಿಂಗಾರಗೊಂಡಿತ್ತು ಎಲ್ಲಿ ನೋಡಿದ್ರು ಅಲ್ಲಿ ಕಲರ್ ಫುಲ್ ಕಟ್ ಔಟ್ ಗಳು ರಾರಾಜಿಸ್ತಾ ಇತ್ತು. ಕಾರಣ ಅಂದ್ರೆ ಅಲ್ಲಿ ಜೆಡಿಎಸ್ ಸಂಕಲ್ಪ ಸಮಾವೇಷಕ್ಕೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಚಾಲನೆಯನ್ನ ನೀಡಿದ್ದಾರೆ. ಈ ವೇದಿಕೆಯಲ್ಲಿ ಮಾಜಿ ಸಚಿವ ಶಾಸಕ ಬಂಡೆಪ್ಪ ಖಾಶಪೂರೆ ಸಾಥ್ ನೀಡಿದ್ರು ಇನ್ನೇನು ಚುನಾವಣಾ ಪ್ರಚಾರಕಗಕೆ ಕ್ಷಣಗಣನೆ‌ ಆರಂಭವಾಗಿದೆ.

ಇನ್ನು ಬಹಳ ದಿನಗಳ ನಂತ್ರ ಬಂದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರನ್ನ ಅಫಜಲಪುರ ಪಟ್ಟಣಕ್ಕೆ ಬಹಳ ವಿಜೃಂಭಣೆಯಿಂದ ಸ್ವಾಗತಿಸಿಕೊಳ್ಳಲಾಗಿದೆ. ಅಫಜಲಪುರದ ಜೆಡಿಎಸ್ ಯುವ ನಾಯಕ ಶಿವಕುಮಾರ್ ನಾಟೀಕಾರ ಅವರು ತೆರೆದ ವಾಹನದಲ್ಲಿ ಅದ್ದೂರಿ ಮೆರವಣಿಗೆಯೊಂದಿಗೆ ಸಮಾವೇಶಕ್ಕೆ ಕರೆತಂದಿದ್ದಾರೆ ಸಮಾವೇಶದಲ್ಲು ಸಹ ಮಹಿಳೆಯರು ಪುರುಷರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಜನಸಮೂಹ ಸೇರಿದ್ದು ಅಫಜಲಪುರ ಮತಕ್ಷೇತ್ರದಲ್ಲಿ ಬದಲಾವಣೆ ಘಾಳಿ ಬೀಸ್ತಾ ಇದೆ ಅನ್ನೋದು ಸಾಬೀತು ಮಾಡುವಂತಿತ್ತು.

ಒಟ್ಟಾರೆಯಾಗಿ ಅಫಜಲಪುರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗಾಗಿ ಸಂಕಲ್ಪ ಯಾತ್ರೆಯನ್ನು ಹಾಕಿಕೊಳ್ಳಲಾಗಿದೆ. ಈ ಮುಲಕ ಬರ್ಜರಿ ಪ್ರಚಾರಕ್ಕೆ ಎಚ್ಡಿಕೆ ಚಾಲನೆ ನೀಡಿದ್ದಾರೆ. ಮುಂಬರುವ ದಿನಗಳಲ್ಲಿ‌ ಮತದಾರ ಯ್ಯಾರ ಕೈಹಿಡೀತಾನೆ ಅನ್ನೋದು ಮಾತ್ರ ಕಾದು ನೋಡಬೇಕು.

Spread the love

Related Articles

Leave a Reply

Your email address will not be published. Required fields are marked *

Back to top button