ಜಿಲ್ಲಾ ಸುದ್ದಿಹುಬ್ಬಳ್ಳಿ - ಧಾರವಾಡ

ಅಧಿವೇಶನ ಬಳಿಕ ದೇವಸ್ಥಾನ ಮತ್ತು ವಕ್ ಆಸ್ತಿಗಳನ್ನು ಡ್ರೋಣ್ ಸರ್ವೆ: ಶಶಿಕಲಾ ಜೊಲ್ಲೆ

ಧಾರವಾಡ: ದೇವಸ್ಥಾನ ಸೇರಿದಂತೆ ವಕ್ ಆಸ್ತಿಗಳ ಒತ್ತುವರಿಯನ್ನು ತಡೆಯಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈಗ ಅಧಿವೇಶನ ನಡೆಯುತ್ತಿದೆ. ಅಧಿವೇಶನ ಬಳಿಕ ರಾಜ್ಯದ ಎಲ್ಲ ದೇವಸ್ಥಾನಗಳ ಹಾಗೂ ವಕ್ ಆಸ್ತಿಗಳನ್ನು ಡ್ರೋಣ್ ಮೂಲಕ ಸರ್ವೆ ಮಾಡಲಾಗುವುದು. ಬಳಿಕ ಒತ್ತುವರಿ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಮುಜರಾಯಿ ಇಲಾಖೆಯ ಸಚಿವೆ ಶಶಿಕಲಾ ಜೊಲ್ಲೆಯವರು ತಿಳಿಸಿದ್ದಾರೆ.

ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಈಗಾಗಲೇ ದೇವಸ್ಥಾನ ಸೇರಿ ವಕ್ ಆಸ್ತಿಗಳ ಸರ್ವೆ ಕುರಿತು ಕಂದಾಯ ಇಲಾಖೆಯ ಸಚಿವರ ಗಮನಕ್ಕೆ ತರಲಾಗಿದೆ. ಅವರು ಕೂಡಾ ಸಕಾರಾತ್ಮಕವಾಗಿ ಸ್ಪಂದನೆ ನೀಡಿದಾರೆ. ಅಧಿವೇಶನ ಬಳಿಕ ಆದಷ್ಟು ಬೇಗ ಡ್ರೋಣ್ ಸರ್ವೆ ಕಾರ್ಯ ಆರಂಭಿಸಲಾಗುವುದು. ಸರ್ವೆ ಕಾರ್ಯ ಮುಗಿದ ಬಳಿಕ ಅಲ್ಲಿ ಕಂಪೌಡ ನಿರ್ಮಿಸಿ ಒತ್ತುವರಿ ಆಗದಂತೆ ನೋಡಿಕೊಳ್ಳಲಾಗುವುದು ಎಂದರು.

205 ದೇವಸ್ಥಾನಗಳನ್ನು ದೈವ ಸಂಕಲ್ಪ ಯೋಜನೆಯಡಿಯಲ್ಲಿ ಅಭಿವೃದ್ಧಿ.
205 ದೇವಸ್ಥಾನಗಳನ್ನ ದೈವ ಸಂಕಲ್ಪ‌ ಯೋಜನೆಯಡಿಲ್ಲಿ ಅಭಿವೃದ್ಧಿ ಪಡಿಸಲಾಗುತ್ತದೆ. ಎ ಗ್ರೇಡ್ ನಲ್ಲಿ 25 , ಬಿ ಗ್ರೆಡ್ ನಲ್ಲಿ 139 ದೇವಸ್ಥಾನಗಳ ವಿಂಗಡನೆ ಮಾಡಲಾಗಿದೆ. ಎ ಗ್ರೇಡ್ ದೇವಸ್ಥಾನಗಳಿಗೆ ಈಗ ಮಾಸ್ಟರ್ ಪ್ಲಾನ್ ಮಾಡಲಾಗುತ್ತಿದೆ. ಇಲ್ಲಿ‌ ಬರುವಂತಹ ಭಕ್ತರಿಗೆ ಮೂಲ ಭೂತ ಸೌಕರ್ಯ ಸಿಗುವ ಹಾಗೇ, ರಸ್ತೆ, ಒಳಚರಂಡಿ, ಪಾರ್ಕಿಂಗ್ ಹಾಗೂ ಭಕ್ತರಿಗೆ ಉಳಿದುಕೊಳ್ಳಲು ವ್ಯವಸ್ಥೆ ಸೇರಿ ಎಲ್ಲವನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿ ಪಡಿಸಲಾಗುವುದು. ಸುಮಾರು 1,140 ಕೋಟಿ ರೂಪಾಯಿ ವೆಚ್ಚದಲ್ಲಿ ಎ ಗ್ರೆಡ್ ದೇವಸ್ಥಾನಗಳ ಅಭಿವೃದ್ಧಿಗೆ ಒತ್ತು ನೀಡಲಾಗುತ್ತದೆ ಎಂದು ಹೇಳುದರು.

ಸಿಎಂರವರ ಕನಸ್ಸಿನ ಯೋಜನೆ ಟೆಂಪಲ್ ಟೂರಿಸಂಗೆ ಒತ್ತು.
ದೇವಸ್ಥಾನಗಳ ಅಭಿವೃದ್ಧಿಯಿಂದ ಆದಾಯ ಕೂಡಾ ಹೆಚ್ಚಾಗುತ್ತದೆ. ಇದರ ಜೊತೆಗೆ ನಮ್ಮ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಕನಸ್ಸಿನ ಯೋಜನೆ ಆಗಿರುವ ಟೆಂಪಲ್ ಟೂರಿಸಂ ಯೋಜನೆ ಯಶಸ್ವಿಯಾಗಲು ತುಂಬಾ ಸಹಕಾರಿಯಾಗುತ್ತದೆ. ಇನ್ನೂ ಕೆಲವೇ ದಿನಗಳಲ್ಲಿ ದೈವ್ ಸಂಕಲ್ಪ ಯೋಜನೆಯನ್ನು ಆರಂಭಿಸಲಾಗುವುದು ಎಂದು ತಿಳಿಸಿದರು. ‌

Spread the love

Related Articles

Leave a Reply

Your email address will not be published. Required fields are marked *

Back to top button