Breaking NewsLatestಕಲಬುರ್ಗಿಜಿಲ್ಲಾ ಸುದ್ದಿ

ಬಜೆಟ್​ನಲ್ಲಿ ರಾಜ್ಯದ ಜನರಿಗೆ ಸಿಎಂ ದ್ರೋಹ: ಹೆಚ್​ಡಿಕೆ

ಕಲಬುರಗಿ: ಮೇಕೆದಾಟು ವಿಚಾರದಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ರಾಜ್ಯದ ಜನರಗೆ ಮೂರು ನಾಮ ಹಾಕ್ತಿವೆ ಅಂತ ಮಾಜಿ ಸಿಎಂ ಹೆಚ್.ಡಿ‌. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಕಲಬುರಗಿಯಲ್ಲಿ ಮಾತನಾಡಿದ ಎಚ್‌ಡಿಕೆ, ಎರಡು ರಾಜ್ಯಗಳು ಒಮ್ಮತಕ್ಕೆ ಬಂದ್ರೆ ನಾವು ಎಂಟ್ರಿ ಆಗ್ತೇವೆ ಎಂದು ಕೇಂದ್ರ ಸರ್ಕಾರ ಹೇಳಿಕೆ ಕೊಡುತ್ತೆ. ನೀರಾವರಿ ತಜ್ಞ ಅಂತ ಹೇಳೋ ಸಿಎಂ ಬಜೆಟಲ್ಲಿ ಏನ್ ಕಾಳಜಿ ತೋರಿದ್ದಾರೆ. ಹೀಗಾಗಿ ನಮ್ಮ ಪಕ್ಷ ನೀರಾವರಿ ವಿಷಯದಲ್ಲಿ ಜನರ ಪರವಾಗಿದೆ ಎಂದಿದ್ದಾರೆ.

ನಾವು ಸ್ಟ್ರೇಟ್ ಫಾರ್ವರ್ಡ್
ನಾನು ಯಾವತ್ತೂ ಬಿಜೆಪಿಗೆ ಸಾಫ್ಟ್ ಕಾರ್ನರ್ ತೋರಿಸಿಲ್ಲ. ಸಾಫ್ಟ್ ಇದ್ದಿದ್ರೆ ನಾನು ಬಿಜೆಪಿ ವಿರುದ್ಧ ಮಾತನಾಡುತ್ತಿರಲಿಲ್ಲ. ಫ್ರೆಂಟು ಬ್ಯಾಕು, ರೈಟು ಲೆಫ್ಟು ಅಂತ ಮಾತಡಲ್ಲ ಏನಿದ್ರೂ ನಾವು ಸ್ಟ್ರೇಟ್. ಎರಡೂ ಪಕ್ಷಗಳು ನಮ್ಮನ್ನ ಬೇಕಾದಾಗ ರೈಟು ಲೆಫ್ಟು ಬಳಸಿಕೊಂಡಿವೆ ಅವಧಿಗೂ ಮುನ್ನವೇ ರಾಜ್ಯದಲ್ಲಿ ಚುನಾವಣೆ ಬರುವ ಸಾಧ್ಯತೆ ಇದೆ. ಒಂದು ವೇಳೆ ಚುನಾವಣೆ ಬಂದ್ರೆ ಜೆಡಿಎಸ್ ಚುನಾವಣೆ ಎದುರಿಸಲು ಸಿದ್ಧವಿದೆ ಎಂದು ಎರಡು ರಾಷ್ಟ್ರೀಯ ಪಕ್ಷದ ವಿರುದ್ಧವಾಗಿ ಹರಿಹಾಯ್ದರು.

ಬಜೆಟ್ ವಿಚಾರದಲ್ಲಿ ಸಿಎಂ ದ್ರೋಹ
ಬಜೆಟ್ ವಿಷಯದಲ್ಲಿ ರಾಜ್ಯದ ಜನರಿಗೆ ಸಿಎಂ ದ್ರೋಹ ಮಾಡಿದ್ದಾರೆ. ಕಳೆದ 75 ವರ್ಷಗಳಿಂದ ಎರಡು ರಾಷ್ಟ್ರೀಯ ಪಕ್ಷಗಳು ನೀರಾವರಿಯನ್ನ ನಿರ್ಲಕ್ಷ್ಯ ಮಾಡಿವೆ. ನೀರಾವರಿಯಲ್ಲಿ ಅನುಭವ ಇರುವ ಬೊಮ್ಮಾಯಿಯವರು ಬಜೆಟ್‌ನಲ್ಲಿ ದೊಡ್ಡ ದ್ರೋಹ ಮಾಡಿದ್ದಾರೆ‌. ಕಾಂಗ್ರೆಸ್ ನವರು ನಮ್ಮ ಪಾದಯಾತ್ರೆ ನೋಡಿ ಸಾವಿರ ಕೋಟಿ ನೀಡಿದ್ದಾರೆ ಅಂತ ಹೇಳ್ತಾರೆ. ಎರಡು ಪಕ್ಷಕ್ಕೆ ಮೇಕೆದಾಟು ಯೋಜನೆ ಪ್ರಾರಂಭ ಮಾಡೋ ಯೋಗ್ಯತೆ ಇಲ್ಲಾ ಅಂತ ಕಿಡಿಕಾರಿದರು.

ಉಕ್ರೇನ್‌ನಲ್ಲಿನ ಕನ್ನಡಿಗರ ರಕ್ಷಣೆ ವಿಚಾರ
ನಮ್ಮ ದೇಶದಲ್ಲಿ ಅವಕಾಶ ವಂಚಿತ ಮಕ್ಕಳು ಉಕ್ರೇನ್‌ಗೆ ಹೋಗುತ್ತಿದ್ದಾರೆ. ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇಲ್ಲಿ ಶಿಕ್ಷಣ ಸಿಗುತ್ತಿಲ್ಲ. ನಮ್ಮಲ್ಲೆ ಉನ್ನತ ಶಿಕ್ಷಣ ಕೈಗೆಟಕುವ ದರದಲ್ಲಿ ಸಿಕ್ಕಿದ್ರೆ ಉಕ್ರೇನ್‌ನಲ್ಲಿ ಪ್ರಾಣ ಕಳೆದುಕೊಳ್ಳುವ ಪರಿಸ್ಥಿತಿ ಬರುತ್ತಿರಲಿಲ್ಲ. ನೀಟ್ ವ್ಯವಸ್ಥೆಯಿಂದ ಅನೇಕ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತೊಂದರೆಯಾಗ್ತಿದೆ. ಉಕ್ರೇನ್‌ನಲ್ಲಿ ಸಿಲುಕಿರುವ ಎಲ್ಲಾ ವಿದ್ಯಾರ್ಥಿಗಳು ಸುರಕ್ಷಿತವಾಗಿ ಮರಳಿ ಬರಲು ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದರು.

Spread the love

Related Articles

Leave a Reply

Your email address will not be published. Required fields are marked *

Back to top button