ಕ್ರಿಕೆಟ್ಬಾಲಿವುಡ್ಮನರಂಜನೆಸಿನಿಮಾಸೆಲೆಬ್ರಿಟಿ

ಶೇನ್ ವಾರ್ನ್ ಗೆ ಸೆಲೆಬ್ರಿಟಿಗಳ ಶ್ರದ್ಧಾಂಜಲಿ: ನನಸಾಗಲಿಲ್ಲ ಸಿನಿಮಾ ಕನಸು!

ವಿಶ್ವ ಕಂಡ ಶ್ರೇಷ್ಠ ಕ್ರಿಕೆಟಿಗ ಶೇನ್ ವಾರ್ನ್ ತಮ್ಮ 52ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ್ದಾರೆ. ಹೃದಯಾಘಾತದಿಂದ ನಿಧನರಾದ ಸ್ಪಿನ್ ಮಾಂತ್ರಿಕ ಶೇನ್ ಗೂ ಭಾರತೀಯ ಚಿತ್ರರಂಗಕ್ಕೂ ಅವಿನಾಭಾವ ನಂಟಿದೆ. ವಾರ್ನ್ ಆಸ್ಟ್ರೇಲಿಯಾ ಕ್ರಿಕೆಟರ್ ಆದರೂ ಭಾರತದಲ್ಲಿ ಅವರ ಜೀವನ ಚರಿತ್ರೆ ಕುರಿತಂತೆ ಸಿನಿಮಾ ಮಾಡುವ ತಯಾರಿ ನಡೆದಿತ್ತು. ಆದ್ರೆ ಅದೇನಾಯ್ತೋ ಏನೋ 2015ರಲ್ಲಿ ಆರಂಭವಾಗಿದ್ದು ಗುಸುಗುಸು ಮುಂದೆ ಯಾವುದೇ ತರಹದ ಸುದ್ದಿ ಮಾಡಲಿಲ್ಲ.

ಶೇನ್ ಬದುಕಿನ ನೈಜ ಚಿತ್ರಣದಲ್ಲಿ ಡ್ರಗ್ಸ್, ಪರಸ್ತ್ರಿ ಮೋಹ ಹಾಗೂ ವಿವಾದಗಳ ಎಳೆಯ ಸುತ್ತ ಸಿನಿಮಾ ಮಾಡೋಕೆ ನಿರ್ಧಾರ ಮಾಡಲಾಗಿತ್ತು. ಕೊರೊನಾ ಕಾರಣದಿಂದಾಗಿ ಈ ವರ್ಷದ ಕೊನೆಯಲ್ಲಿ ಸಿನಿಮಾ ವರ್ಕ್ ಪ್ರಾರಂಭವಾಗುತ್ತೆ ಅಂತಲೂ ಸುದ್ದಿಯಾಗಿತ್ತು. ಅಲ್ಲದೆ ತನ್ನ ಪಾತ್ರದಲ್ಲಿ ಹಾಲಿವುಡ್ ಹೀರೋಗಳಾದ ಬ್ರಾಡ್ ಪಿಟ್ ಅಥವಾ ಲಿಯೊನಾರ್ಡ್ ಡಿಕಾಪ್ರಿಯೋ ನಟಿಸಬೇಕು ಅಂತಲೂ ವಾರ್ನ್ ಹಂಬಲ್ ವ್ಯಕ್ತಪಡಿಸಿದ್ರು. ಆದ್ರೆ ಅದ್ಯಾಕೋ ಗೊತ್ತಿಲ್ಲ ಸಿನಿಮಾ ಕೆಲಸಗಳು ಆರಂಭವಾದ ಬಗ್ಗೆ ಮಾಹಿತಿಯೇ ಹೊರಬೀಳಲಿಲ್ಲ.

ಇದೀಗ ಶೇನ್ ನಮ್ಮನ್ನೆಲ್ಲಾ ಬಿಟ್ಟು ಅಗಲಿದ್ದಾರೆ. ಅವರ ಮರಣದ ಬಳಿಕವಾದ್ರೂ ಅವರ ಬಯೋಪಿಕ್ ಚಿತ್ರ ಸೆಟ್ಟೇರುತ್ತಾ ಗೊತ್ತಿಲ್ಲ. ಶೇನ್ ನಿಧನಕ್ಕೆ ಭಾರತೀಯ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಕಂಬನಿ ಮಿಡಿದಿದ್ದಾರೆ. ಅಜಯ್ ದೇವಗನ್, ರಣವೀರ್ ಸಿಂಗ್ , ಶಿಲ್ಪಾಶೆಟ್ಟಿ ಸೇರಿದಂತೆ ಅನೇಕ ಬಾಲಿವುಡ್ ನಟ ನಟಿಯರು, ಟ್ವೀಟ್ ಮೂಲಕ ಶ್ರದ್ದಾಂಜಲಿ ಅರ್ಪಿಸುತ್ತಿದ್ದಾರೆ. ಶೇನ್ ವಾರ್ನ್ ಆತ್ಮಕ್ಕೆ ಶಾಂತಿ ಸಿಗಲಿ.

Image Courtesy: inews.co.uk

Spread the love

Related Articles

Leave a Reply

Your email address will not be published. Required fields are marked *

Back to top button