ರಾಜಕೀಯದಲ್ಲಿ ಆಸಕ್ತಿ ಇಲ್ಲ ಎಂದ ಜನಾರ್ದನ ರೆಡ್ಡಿ ಪುತ್ರ ಕಿರೀಟಿ

ರಾಜಕಾರಣಿಗಳ ಮಕ್ಕಳು ಸಿನಿಮಾ ರಂಗಕ್ಕೆ ಎಂಟ್ರಿಕೊಡೋದು ಹೊಸದೇನೂ ಅಲ್ಲ. ಈಗಾಗ್ಲೆ ಸಾಕಷ್ಟು ರಾಜಕೀಯ ನಾಯಕರ ಮಕ್ಕಳು ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದು ಆ ಸಾಲಿಗೆ ಜನಾರ್ದನ ರೆಡ್ಡಿ ಪುತ್ರ ಕಿರೀಟಿ ರೆಡ್ಡಿ ಸೇರಿಕೊಂಡಿದ್ದಾರೆ. ಮೊದಲ ಸಿನಿಮಾದಲ್ಲಿಯೇ ದೊಡ್ಡ ನಿರ್ಮಾಣ ಸಂಸ್ಥೆ ‘ವಾರಾಹಿ ಫಿಲ್ಮಂ ಪ್ರೊಡಕ್ಷನ್’ ಜೊತೆ ಕೈ ಜೋಡಿಸುತ್ತಿದ್ದು, ಚಿತ್ರದಲ್ಲಿ ರವಿಚಂದ್ರನ್, ಜೆನಿಲಿಯಾ ಸೇರಿದಂತೆ ಸಾಕಷ್ಟು ಸ್ಟಾರ್ ಸೆಲೆಬ್ರಿಟಿಗಳು ನಟಿಸುತ್ತಿದ್ದಾರೆ. ಬಣ್ಣದ ಲೋಕದಲ್ಲಿ ಗುರುತಿಸಿಕೊಳ್ಳಬೇಕು ಎಂಬ ಕನಸು ಇಟ್ಟುಕೊಂಡಿರುವ ಕಿರೀಟಿ ಸಾಕಷ್ಟು ತಯಾರಿ ಮಾಡಿಕೊಂಡು ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ. ತಂದೆ ರಾಜಕೀಯದಲ್ಲಿ ಹೆಸರು ಮಾಡಿದ್ದರೂ ಕಿರೀಟಿಗೆ ಆ ಕ್ಷೇತ್ರದಲ್ಲಿ ಆಸಕ್ತಿ ಇಲ್ಲ. ಚಿಕ್ಕ ಹುಡುಗ ಆದಾಗಿನಿಂದ ಕಿರೀಟಿಗೆ ಇದ್ದ ಇದ್ದ ಒಂದೇ ಒಂದು ಆಸೆ ನಟ ಆಗಬೇಕು ಅನ್ನೋದು. ಕನ್ನಡ ಚಿತ್ರರಂಗದಲ್ಲಿ ಒಬ್ಬ ನಟನಾಗಿ ನಾನು ಉಳಿದುಕೊಳ್ಳಬೇಕು. ರಾಜಕೀಯದ ಬಗ್ಗೆ ನಾನು ಎಂದಿಗೂ ಯೋಚನೆ ಮಾಡಿಲ್ಲ. ಅದರ ಮೇಲೆ ನನಗೆ ಆಸೆಯೂ ಇಲ್ಲ. ಮುಂದೆ ಯಾರು ಪ್ರಶ್ನೆ ಕೇಳಿದರೂ ನನ್ನ ಉತ್ತರ ಇದೇ ಆಗಿರುತ್ತದೆ. ನನಗೆ ರಾಜಕೀಯಕ್ಕೆ ಹೋಗುವ ಉದ್ದೇಶ ಇಲ್ಲ’ ಎಂದು ಕಿರೀಟಿ ರೆಡ್ಡಿ ಹೇಳಿದ್ದಾರೆ.
