ಬ್ಯಾಂಕ್ ಖಾತೆ ಸ್ಥಗಿತವಾಗುತ್ತೆ ಅಂತೇಳಿ ವಂಚನೆ: 73 ಸಾವಿರ ಮಾಯ!

ಹುಬ್ಬಳ್ಳಿ: ದಿನೇ ದಿನೇ ಸೈಬರ್ ಕ್ರೈಂ ರೇಟ್ ಮಿತಿ ಮೀರುತ್ತಲೇ ಇದೆ. ಬ್ಯಾಂಕ್ ನವರು ಹಾಗೆಯೇ ಪೊಲೀಸರು ಪದೇ ಪದೇ ಮೆಸೇಜ್ ಕಳಿಸಿ ಅವೇರ್ ನೆಸ್ ಕ್ರಿಯೇಟ್ ಮಾಡುತ್ತಿದ್ದರು ಪ್ರಯೋಜನವಾಗಿಲ್ಲ. ಕರೆ ಮಾಡಿ, ಮೆಸೇಜ್ ಕಳಿಸಿ ವಂಚಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಲೇ ಇವೆ. ಅಂದಾಗೆ ಬ್ಯಾಂಕ್ ಖಾತೆ ಸ್ಥಗಿತವಾಗುತ್ತದೆ ಎಂದು ಅಪರಿಚಿತನೊಬ್ಬ ಕಳಿಸಿದ ಮೆಸೇಜ್ ನಂಬಿ ಹಣ ಕಳೆದುಕೊಂಡವರ ಕಥೆ ಮತ್ತು ವ್ಯಥೆ ಇದು.
ಹುಬ್ಬಳ್ಳಿಯ ನಿವಾಸಿ ಗಫಾರಶೇಖ್ ಖಾದರವಲಿ ಎಂಬುವವರೇ ವಂಚನೆಗೆ ಒಳಗಾದ ವ್ಯಕ್ತಿ. ಅಪರಿಚಿತನೊಬ್ಬ ನಿಮ್ಮ ಬ್ಯಾಂಕ್ ಖಾತೆ ಸ್ಥಗಿತವಾಗುತ್ತದೆ ಎಂದು ಮೆಸೇಜ್ ಕಳುಹಿಸಿದ್ದ. ಮೆಸೇಜ್ ಕಳಿಸಿದಾತ ಬ್ಯಾಂಕ್ ಸಿಬ್ಬಂದಿ ಇರಬಹುದು ಎಂದು ನಂಬಿದ ಖಾದರವಲಿ ಸಂದೇಶದಲ್ಲಿರುವ ಲಿಂಕ್ ಓಪನ್ ಮಾಡಿದ್ದಾರೆ. ನಂತರ ವೆಬ್ಸೈಟ್ನಲ್ಲಿ ಹೆಸರು, ಪಾಸ್ ವರ್ಡ್, ಮೊಬೈಲ್ ನಂಬರ್ ನಮೂದಿಸಿ ಲಾಗಿನ್ ಆಗಿದ್ದಾರೆ. ನಂತರ ಓಟಿಪಿ ಬಂದಿದ್ದು, ಅದನ್ನು ಹಾಕಿದ್ದಾರೆ. ಇದಾದ ಬಳಿಕ ಅವರ ಖಾತೆಯಿಂದ ಮೊದಲು 25 ಸಾವಿರ, 48 ಸಾವಿರ ರೂ. ಹಣ ಹಂತ ಹಂತವಾಗಿ ಮಾಯವಾಗಿದೆ.
ಖಾತೆಯಲ್ಲಿನ ಹಣ ತೆಗೆದಿರುವ ಸಂದೇಶ ಬರುತ್ತಿದಂತೆ ಬ್ಯಾಂಕ್ಗೆ ಭೇಟಿ ನೀಡಿ ವಿಚಾರಿಸಿದಾಗ ವಂಚನೆಯಾಗಿರುವುದು ಬೆಳಕಿಗೆ ಬಂದಿದೆ. ತಕ್ಷಣವೇ ಹುಬ್ಬಳ್ಳಿ ಸೈಬರ್ ಠಾಣೆಗೆ ತೆರಳಿದ ಖಾದರವಲಿ, ವಂಚನೆಯಾಗಿರುವ ಕುರಿತು ಪೊಲೀಸರಿಗೆ ಮಾಹಿತಿ ನೀಡಿ ದೂರು ದಾಖಲು ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಸೈಬರ್ ಕ್ರೈಂ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಎಲ್ಲೋ ಕೂತು ಜಸ್ಟ್ ಮೆಸೇಜ್ ನಿಂದ ಆಪರೇಟ್ ಮಾಡುವವರನ್ನ ಪತ್ತೆ ಹಚ್ಚುವುದು ಸೈಬರ್ ಪೊಲೀಸರಿಗೆ ದೊಡ್ಡ ಸವಾಲಾಗಿದೆ. ಪ್ರಕರಣ ಭೇದಿಸಿ ಆರೋಪಿಗಳನ್ನ ಪತ್ತೆ ಹಚ್ಚುತ್ತಾರ ಕಾದು ನೋಡಬೇಕಿದೆ.




