Breaking NewsLatestಕ್ರಿಕೆಟ್ಕ್ರೀಡೆ

ಐಪಿಎಲ್ ಬಳಿಕ ಟೀಮ್ ಇಂಡಿಯಾದ ಬಿಡುವಿಲ್ಲದ ವೇಳಾಪಟ್ಟಿ

ಅಕ್ಟೋಬರ್‌ನಲ್ಲಿ ನಡೆಯಲಿರುವ ಟಿ-20 ವಿಶ್ವಕಪ್‌ಗೂ ಮುನ್ನ ಭಾರತ ತಂಡದ ವೇಳಾಪಟ್ಟಿ ಬಿಡುವಿಲ್ಲದ್ದಾಗಿದೆ. ಜೂನ್‌ನಲ್ಲಿ, ಟೀಮ್ ಇಂಡಿಯಾ ಎರಡು ಪಂದ್ಯಗಳ ಟಿ-20 ಸರಣಿಗಾಗಿ ಐರ್ಲೆಂಡ್‌ಗೆ ಹೋಗಲಿದೆ. ಈ ಮಾಹಿತಿಯನ್ನು ಐರ್ಲೆಂಡ್ ಕ್ರಿಕೆಟ್ ಮಂಡಳಿ ಸಾಮಾಜಿಕ ಜಾಲತಾಣಗಳ ಮೂಲಕ ಬಹಿರಂಗ ಪಡಿಸಿದೆ. ಭಾರತವಲ್ಲದೆ, ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಐರ್ಲೆಂಡ್ ವಿರುದ್ಧ ಸರಣಿಯನ್ನು ಆಡಲಿವೆ.

ಐಪಿಎಲ್ 2022 ರ ನಂತರ, ಟೀಂ ಇಂಡಿಯಾ ಜೂನ್ ಕೊನೆಯ ವಾರದಲ್ಲಿ ಐರ್ಲೆಂಡ್ ಪ್ರವಾಸ ಮಾಡಲಿದೆ ಮತ್ತು ಎರಡೂ ಟಿ-20 ಪಂದ್ಯಗಳು ಜೂನ್ 26 ಮತ್ತು 28 ರಂದು ಮಲಾಹೈಡ್‌ನಲ್ಲಿ ನಡೆಯಲಿವೆ. ಶ್ರೀಲಂಕಾ ವಿರುದ್ಧದ ಟಿ-20 ಸರಣಿ ಗೆದ್ದಿರುವ ಭಾರತ ತಂಡ ಸದ್ಯ ಟೆಸ್ಟ್ ಸರಣಿಗೆ ತಯಾರಿ ನಡೆಸುತ್ತಿದೆ.

ಐರ್ಲೆಂಡ್ ಬಳಿಕ ಟೀಂ ಇಂಡಿಯಾ ಇಂಗ್ಲೆಂಡ್ ಪ್ರವಾಸಕ್ಕೆ ತೆರಳಲಿದೆ. ಇಂಗ್ಲೆಂಡ್ ಪ್ರವಾಸದಲ್ಲಿ ಭಾರತ 1 ಟೆಸ್ಟ್, 3 ಟಿ-20 ಹಾಗೂ 3 ಏಕದಿನ ಪಂದ್ಯಗಳ ಸರಣಿಯನ್ನು ಆಡಬೇಕಿದೆ. ಜುಲೈ 1 ರಿಂದ ಜುಲೈ 17 ರವರೆಗೆ ಈ ಪ್ರವಾಸ ನಡೆಯಲಿದೆ.

ಕಳೆದ ವರ್ಷ 2021 ರಲ್ಲಿ, ಟೀಂ ಇಂಡಿಯಾ ಇಂಗ್ಲೆಂಡ್ ಪ್ರವಾಸದಲ್ಲಿ 5 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲು ಹೋಗಿತ್ತು, ಆದರೆ ಕೊನೆಯ ಟೆಸ್ಟ್ ಅನ್ನು ಕೋವಿಡ್ -19 ಕಾರಣ ಮುಂದೂಡಲಾಯಿತು. ಉಳಿದಿರುವ ಆ ಟೆಸ್ಟ್‌ನಿಂದ ಇಂಗ್ಲೆಂಡ್ ಪ್ರವಾಸ ಆರಂಭವಾಗಲಿದೆ. ಸದ್ಯ ಭಾರತ ಟೆಸ್ಟ್ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ. ಭಾರತ ತಂಡ 5ನೇ ಟೆಸ್ಟ್ ಗೆಲ್ಲುವಲ್ಲಿ ಯಶಸ್ವಿಯಾದರೆ, 15 ವರ್ಷಗಳ ನಂತರ ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್ ಸರಣಿಯನ್ನು ಗೆಲ್ಲುತ್ತದೆ.

ಇಂಗ್ಲೆಂಡ್ ನಂತರ ಭಾರತ ತಂಡ ಆಗಸ್ಟ್-ಸೆಪ್ಟೆಂಬರ್ ನಲ್ಲಿ ಜಿಂಬಾಬ್ವೆ ಪ್ರವಾಸಕ್ಕೆ ತೆರಳಬಹುದು. ಆದರೆ, ಈ ಪ್ರವಾಸದ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ಅದೇ ಸಮಯದಲ್ಲಿ, ಸೆಪ್ಟೆಂಬರ್‌ನಲ್ಲಿ, ಏಷ್ಯಾ ಕಪ್ ಆಡಲು ತಂಡವು ಶ್ರೀಲಂಕಾಕ್ಕೆ ಹೋಗಬೇಕಾಗಿದೆ. ಈ ಬಾರಿಯ ಟೂರ್ನಿ ಟಿ-20 ಮಾದರಿಯಲ್ಲಿ ನಡೆಯಲಿದೆ. ಭಾರತ ತಂಡ ಏಷ್ಯಾಕಪ್‌ನಲ್ಲಿ ಸುಮಾರು 5 ಪಂದ್ಯಗಳನ್ನು ಆಡಲಿದೆ.

ಟಿ20 ವಿಶ್ವಕಪ್ ಅಕ್ಟೋಬರ್ 16 ರಂದು ಆಸ್ಟ್ರೇಲಿಯಾ ಮೈದಾನದಲ್ಲಿ ಆರಂಭವಾಗಲಿದ್ದು, ನವೆಂಬರ್ 13 ರಂದು ಟೂರ್ನಿಯ ಫೈನಲ್ ಪಂದ್ಯ ನಡೆಯಲಿದೆ.

Spread the love

Related Articles

Leave a Reply

Your email address will not be published. Required fields are marked *

Back to top button