Breaking NewsLatestಆಹಾರಲೈಫ್ ಸ್ಟೈಲ್

ರುಚಿ…ರುಚಿಯಾಗಿ ಸವಿಯಲು ಚಿಕನ್ ಮಸ್ತಾನಿ ಮಾಡಿ, ನೋಡಿ

ಚಿಕನ್ ಅಂದರೆ ಯಾರಿಗೆ ತಾನೆ ಇಷ್ಟವಿಲ್ಲ. ಚಿಕನ್ ನಿಂದ ವಿವಿಧ ರೀತಿಯಲ್ಲಿ ಅಡುಗೆ ಮಾಡಿದರೆ ಎಂಥವರಿಗೂ ಇಷ್ಟವಾಗುತ್ತದೆ. ಒಮ್ಮೆ ನಾಲಿಗೆಗೆ ರುಚಿಯಾದ ತಿಂಡಿ ತಿನ್ನಲು ಬಯಸಿದವರಿಗೆ ಮನೆಯಲ್ಲೇ ಸುಲಭವಾಗಿ ಚಿಕನ್ ಮಸ್ತಾನಿಯನ್ನು ತಯಾರು ಮಾಡಿ.

ಬೇಕಾಗುವ ಸಾಮಗ್ರಿಗಳು:

ಚಿಕನ್-1 ಕೆಜಿ
ಅಡುಗೆ ಎಣ್ಣೆ- ಅರ್ಧ ಕಪ್
ತುಪ್ಪ-2 ಚಮಚ,
ಈರುಳ್ಳಿ ಪೇಸ್ಟ್- ಅರ್ಧ ಕಪ್
ಶುಂಠಿ ಬೆಳ್ಳುಳ್ಳಿ ಪೇಸ್ಟ್-1 ಚಮಚ
ಜೀರಿಗೆ ಪುಡಿ-1 ಚಮಚ
ಗರಂ ಮಸಾಲ-1 ಚಮಚ
ಮೆಣಸಿನ ಹುಡಿ-1 ಚಮಚ
ಅರಿಶಿನ ಹುಡಿ – 1 ಚಮಚ
ಕರಿಮೆಣಸಿನ ಹುಡಿ-1 ಚಮಚ
ಚಾಟ್ ಮಸಾಲ-1 ಚಮಚ
ಮೊಸರು-1 ಕಪ್
ರುಚಿಗೆ ತಕ್ಕಷ್ಟು ಉಪ್ಪು
ಕೊತ್ತಂಬರಿ ಸೊಪ್ಪು- ಸ್ವಲ್ಪ

ಮಾಡುವ ವಿಧಾನ:

ಒಂದು ಬಾಣಲೆಗೆ ಅಡುಗೆ ಎಣ್ಣೆ, ಈರುಳ್ಳಿ ಪೇಸ್ಟ್, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ, ನಂತರ ಚಿಕನ್ ಹಾಕಿ ಅದಕ್ಕೆ ಒಂದೊಂದು ಚಮಚ ಜೀರಿಗೆ, ಮೆಣಸಿನ ಹುಡಿ, ಗರಂ ಮಸಾಲೆ, ಅರಿಸಿನ ಹುಡಿ, ಕಾಳುಮೆಣಸು ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಬೇಕು. ಅದಕ್ಕೆ ಚಾಟ್ ಮಸಾಲ, ಗಟ್ಟಿ ಮೊಸರು ಸೇರಿಸಿ. ಚೆನ್ನಾಗಿ ಬೇಯಿಸಿ.ನಂತರ ಇನ್ನೊಂದು ಬಾಣಲೆಯಲ್ಲಿ ಸಾಸಿವೆ, ಜೀರಿಗೆ, ಬೆಳ್ಳುಳ್ಳಿ,ಕೊತ್ತಂಬರಿ ಒಗ್ಗರಣೆ ಮಾಡಿಕೊಂಡು ಚಿಕನ್ ಪಾತ್ರಗೆ ಹಾಕಿದರೆ ರುಚಿಯಾದ ಚಿಕನ್ ಮಸ್ತಾನಿ ರೆಡಿಯಾಗುತ್ತದೆ.

Spread the love

Related Articles

Leave a Reply

Your email address will not be published. Required fields are marked *

Back to top button