ಮತ್ತೆ ಚಿತ್ರರಂಗದ ಕಡೆ ಕಮ್ ಬ್ಯಾಕ್ ಮಾಡಿದ ನಟ ಶಾರೂಖ್ ಖಾನ್

ಬಿಟೌನ್ ನಟ ಶಾರೂಖ್ ಖಾನ್ ಸಿನಿಮಾ ಅಂದರೆ ಸಾಕು ಅಭಿಮಾನಿಗಳಿಗೆ ಎಲ್ಲಿಲ್ಲದ ಕ್ರೇಜ್ ಹುಟ್ಟುತ್ತದೆ. ಅವರ ನಟನೆಯ ಜೀರೋ ಸಿನಿಮಾ ಬಿಡುಗಡೆಯಾಗಿದ್ದು, ಬಿಟ್ಟರೆ ಮತ್ತೆ ಯಾವ ಸಿನಿಮಾ ರಿಲೀಸ್ ಆಗಲಿಲ್ಲ. ಸ್ವಲ್ಪ ವರ್ಷಗಳ ಕಾಲ ಬಿಡುವು ಪಡೆದುಕೊಂಡಿದ್ದ ಶಾರೂಖ್ ಖಾನ್ ಇದೀಗ ಮತ್ತೆ ಕಮ್ ಬ್ಯಾಕ್ ಮಾಡಿದ್ದಾರೆ. ಇದರಿಂದ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ.
ಹೌದು ಶಾರೂಖ್ ಖಾನ್ ಅಭಿನಯದ ಮುಂದಿನ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಅವರ ಮುಂದಿನ ಚಿತ್ರ ಪಠಾಣ್ ಬಿಡುಗಡೆಗೆ ಸಜ್ಜಾಗಿದೆ. ಹೀಗಾಗಿ ಚಿತ್ರದ ಮೊದಲ ಟೀಸರ್ ರಿಲೀಸ್ ಮಾಡಿದ್ದಾರೆ. ಸದ್ಯ ಅಭಿಮಾನಿಗಳು ಶಾರೂಖ್ ಅವರನ್ನು ತೆರೆಮೇಲೆ ನೋಡಲು ಕಾತುರದಿಂದ ಕಾಯುತ್ತಿದ್ದಾರೆ. .
ಪಠಾಣ್ ಚಿತ್ರದ ಮೂಲಕ ಶಾರುಖ್ ಖಾನ್ ಬಿಗ್ ಸ್ಕ್ರೀನ್‌ಗೆ ಮತ್ತೆ ಮರಳಿದ್ದಾರೆ. ಈ ವಿಚಾರವನ್ನು ಸ್ವತಃ ಶಾರುಖ್ ಖಾನ್ ಟೀಸರ್ ಮೂಲಕ ಹೇಳಿಕೊಂಡಿದ್ದಾರೆ. ಚಿತ್ರದ ಟೀಸರ್‌ನಲ್ಲಿ ಮೊದಲು ನಟ ಜಾನ್ ಅಬ್ರಾಹಮ್ ಕಾಣಿಸಿಕೊಂಡಿದ್ದಾರೆ. ನಂತರ ದೀಪಿಕಾ ಪಡುಕೋಣೆ ಡೈಲಾಗ್ ಇದೆ. ಆ ಬಳಿಕ ಅಸ್ಪಷ್ಟವಾದ ದೃಶ್ಯದಲ್ಲಿ ಶಾರುಖ್ ಎಂಟ್ರಿ ಇದೆ.
ಅಂದಹಾಗೆ ಈ ಚಿತ್ರದ ಟೀಸರ್ ಜೊತೆಗೆ ರಿಲೀಸ್ ದಿನಾಂಕವನ್ನು ಘೋಷಣೆ ಮಾಡಿದ್ದಾರೆ. ಮುಂದಿನ ವರ್ಷ ಅಂದರೆ 2023ರಂದು ಜನವರಿ 25ಕ್ಕೆ ರಿಲೀಸ್ ಆಗಲಿದೆ.
