Breaking NewsLatestಮನರಂಜನೆಸಿನಿಮಾಸ್ಯಾಂಡಲ್ ವುಡ್

ದುನಿಯಾ ವಿಜಯ್ ನಿರ್ದೇಶನದ ಮತ್ತೊಂದು ಚಿತ್ರದ ಟೈಟಲ್ ಅನೌನ್ಸ್

ದುನಿಯಾ ವಿಜಯ್ ನಿರ್ದೇಶನದ ಮತ್ತೊಂದು ಸಿನಿಮಾದ ಹೆಸರು ಇಂದು ಘೋಷಣೆಯಾಗಿದೆ. ಸಲಗ ಸಿನಿಮಾದ ಮೂಲಕ ದುನಿಯಾ ವಿಜಯ್ ಮುಂದೇನು ಮಾಡುತ್ತಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿತ್ತು. ಇದೀಗ ಎಲ್ಲ ಗೊಂದಲಕ್ಕೂ ತೆರೆ ಬಿದ್ದಿದೆ. ಇದೀಗ ಅವರ ನಿರ್ದೇಶನದ ಎರಡನೇ ಚಿತ್ರಕ್ಕೆ ವಿಜಯ್ ಭೀಮ ಎಂದು ಹೆಸರಿಡಲಾಗಿದೆ.

ಈ ಚಿತ್ರದಲ್ಲೂ ಕೂಡ ಅವರು ನಟನೆಯ ಜೊತೆಗೆ ನಿರ್ದೇಶನವನ್ನೂ ಮಾಡಲಿದ್ದಾರೆ.ಸದ್ಯ ಈ ಚಿತ್ರಕ್ಕೆ ಶೀರ್ಷಿಕೆ ಮಾತ್ರ ಅನಾವರಣಗೊಂಡಿದೆ. ನಿರ್ಮಾಪಕರ ಹೊರತಾಗಿ ಉಳಿದಂತೆ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.ತೆಲುಗಿನ ಬಾಲಯ್ಯ ನಟನೆಯ ಹೊಸ ಸಿನಿಮಾದಲ್ಲಿ ವಿಜಯ್ ನಟಿಸುತ್ತಿದ್ದಾರೆ.

ಈ ಮಧ್ಯೆಯೇ ಅವರು ಹೊಸ ಸಿನಿಮಾದ ಸ್ಕ್ರೀಪ್ಟ್ ಕೆಲಸದಲ್ಲೂ ತೊಡಗಿದ್ದಾರೆ. ತಾಂತ್ರಿಕ ತಂಡದಲ್ಲಿ ಬಹುತೇಕ ಸಲಗ ಟೀಮ್ ಈ ಚಿತ್ರದಲ್ಲಿ ಇರಲಿದೆಯಂತೆ. ಇನ್ನೇನು ಶೀಘ್ರದಲ್ಲೇ ಚಿತ್ರತಂಡ ಮಾಹಿತಿ ಹಂಚಿಕೊಳ್ಳಲಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button