ಶಕ್ತಿಧಾಮದ ಮಕ್ಕಳೊಂದಿಗೆ ಮಗುವಾದ ಶಿವರಾಜ್ ಕುಮಾರ್

ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಇತ್ತೀಚೆಗೆ ಫುಲ್ ಬ್ಯುಸಿಯಾಗಿದ್ದಾರೆ. ಪುನೀತ್ ರಾಜ್ ಕುಮಾರ್ ನಿಧನದ ನೋವಿನಲ್ಲೂ ಶಿವಣ್ಣ ಸಿನಿಮಾ ಹಾಗೂ ಶಕ್ತಿದಾಮದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಆಗಾಗ ಶಕ್ತಿದಾಮಕ್ಕೆ ಭೇಟಿ ನೀಡಿ ಮಕ್ಕಳ ಜೊತೆ ಕಾಲ ಕಳೆಯುತ್ತಿರುವ ಶಿವಣ್ಣ ಇದೀಗ ಮತ್ತೆ ಶಕ್ತಿದಾಮಕ್ಕೆ ಭೇಟಿ ನೀಡಿದ್ದಾರೆ.
ನಟ ಪುನೀತ್ ರಾಜ್ ಕುಮಾರ್ ನಿಧನದ ಬಳಿಕ ಮೈಸೂರಿನ ಶಕ್ತಿಧಾಮದ ಜವಬ್ದಾರಿ ನಟ ಶಿವಣ್ಣ ದಂಪತಿ ಹೆಗಲೇರಿದೆ. ಈ ಹಿಂದೆ ಮೈಸೂರಿಗೆ ಭೇಟಿ ನೀಡಿದ್ದ ಶಿವರಾಜ್ ಕುಮಾರ್ ಶಕ್ತಿಧಾಮದ ಮಕ್ಕಳನ್ನ ಪಿಕ್ ನಿಕ್ ಕರೆದುಕೊಂಡು ಹೋಗಿದ್ದರು. ಜೊತೆಗೆ ಬೆಂಗಳೂರಿಗೆ ಕರೆ ತಂದು ಸಾಕಷ್ಟು ಸ್ಥಳಗಳ ಪರಿಚಯ ಮಾಡಿಕೊಟ್ಟಿದ್ರು. ಇದೀಗ ಮತ್ತೊಮ್ಮೆ ಮೈಸೂರಿನ ಶಕ್ತಿಧಾಮಕ್ಕೆ ಭೇಟಿ ನೀಡಿ ಮಕ್ಕಳ ಜೊತೆ ಕಾಲ ಕಳೆದಿದ್ದಾರೆ.
ಶಕ್ತಿ ಧಾಮಕ್ಕೆ ಭೇಟಿ ನೀಡಿರುವ ಶಿವರಾಜ್ ಕುಮಾರ್ ಮಕ್ಕಳ ಜೊತೆ ಮಗುವಾಗಿ ಆಟವಾಡಿದ್ದಾರೆ. ಮಕ್ಕಳ ಗುಂಪು ಕಟ್ಟಿಕೊಂಡು ಹಾಡಿ ಕುಣಿದಿರುವ ವಿಡಿಯೋ ವೈರಲ್ ಆಗಿದೆ. ಫೆ.26ರಂದು ಶಿವಣ್ಣ ಶಕ್ತಿಧಾಮಕ್ಕೆ ಭೇಟಿ ನೀಡಿದ್ದು ಅಲ್ಲಿನ ಮಕ್ಕಳ ಜೊತೆ ಆಟವಾಡಿದ್ದಾರೆ.




