Russia Ukraine War: ಬಾಂಬ್ ದಾಳಿಯಲ್ಲಿ ವಿಶ್ವದ ಅತೀ ದೊಡ್ಡ ವಿಮಾನ ನಾಶ

ಕೀವ್ : ಉಕ್ರೇನ್ನಲ್ಲಿ ನಿರ್ಮಿಸಿದ ವಿಶ್ವದ ಅತೀ ದೊಡ್ಡ ಸರಕು ಸಾಗಣೆ ವಿಮಾನ ಮ್ರಿಯಾ,’ ರಷ್ಯಾದಾಳಿಯಲ್ಲಿ ಸಿಲುಕಿ ನಾಶವಾಗಿದೆ ಎಂದು ವರದಿಯಾಗಿದೆ.
ಕೀವ್ ಸಮೀಪದಲ್ಲಿ ವಿಶ್ವದ ಅತಿ ದೊಡ್ಡದಾದ AN-225 ಮ್ರಿಯಾ ಸರಕು ಸಾಗಣೆ ವಿಮಾನವನ್ನು ರಷ್ಯಾ ಪಡೆಗಳು ನಾಶಪಡಿಸಿವೆ. ಆದರೆ ನಮ್ಮ ಮ್ರಿಯಾ ಎಂದಿಗೂ ನಾಶವಾಗುವುದಿಲ್ಲ ಎಂದು ಉಕ್ರೇನ್ ಸರ್ಕಾರ ಟ್ವೀಟ್ ಮಾಡಿದೆ.
ನಾವು ಈ ವಿಮಾನವನ್ನು ಮತ್ತೆ ನಿರ್ಮಿಸುವ ಮೂಲಕ ನಮ್ಮ ಕನಸನ್ನು ಮತ್ತಷ್ಟು ಬಲಿಷ್ಠ, ಮುಕ್ತ ಹಾಗೂ ಪ್ರಜಾಪ್ರಭುತ್ವದ ಉಕ್ರೇನ್ ಅನ್ನು ರೂಪಿಸುತ್ತೇವೆ ಎಂದು ಹೇಳಿದೆ.
ಇದರ ಜೊತೆ ವಿಮಾನದ ಫೋಟೋ ಹಂಚಿಕೊಂಡಿದ್ದು ಅತಿ ದೊಡ್ಡ ವಿಮಾನಗಳನ್ನು ಸುಟ್ಟು ಹಾಕಿದ್ದಾರೆ. ಆದರೆ ನಮ್ಮ ಮ್ರಿಯಾ ಎಂದಿಗೂ ನಾಶವಾಗುವುದಿಲ್ಲ ಎಂದು ಅವರು ಬರೆದುಕೊಂಡಿದ್ದಾರೆ.
1988 ರಲ್ಲಿ ಮೊದಲ ಬಾರಿಗೆ ಟೇಕ್ ಆಫ್ ಆದ ವಿಮಾನವನ್ನು ಪ್ರಪಂಚದಾದ್ಯಂತ ದೊಡ್ಡ ಪ್ರಮಾಣದ ಮಾನವೀಯ ಸಹಾಯವನ್ನು ಸಾಗಿಸಲು ಬಳಸಲಾಯಿತು, ವಿಶೇಷವಾಗಿ ಅಲ್ಪಾವಧಿಯಲ್ಲಿ. ಸೋವಿಯತ್ ಬಾಹ್ಯಾಕಾಶ ನೌಕೆಗಳನ್ನು ವರ್ಗಾಯಿಸಲು ಸಹ ಇದನ್ನು ಬಳಸಲಾಯಿತು.
