Breaking NewsLatestವಿದೇಶಸುದ್ದಿಸ್ಪೆಷಲ್ ಸ್ಟೋರೀಸ್
Miss Ukraine Anastasiia Lenna: ಸಿಡಿದೆದ್ದ ಉಕ್ರೇನ್ ಮಾಡೆಲ್ : ಗನ್ ಹಿಡಿದ ಅನಸ್ತಾಸಿಯಾ ಲೆನ್ನಾ

ರಷ್ಯಾ ದಾಳಿಯಿಂದ ಉಕ್ರೇನ್ ತತ್ತರಿಸಿ ಹೋಗುತ್ತಿದೆ. ಉಕ್ರೇನ್ ಆಧ್ಯಕ್ಷ ವ್ಲಾಡಿಮಿರ್ ಝೆಲನ್ಸ್ಕಿ ದೇಶ ರಕ್ಷಣೆಗೆ ಪಾಲ್ಗೊಳ್ಳಿ ಎಂದು ಜನರಿಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಈಗ ಮಾಡೆಲ್ ಒಬ್ಬರು ದೇಶ ತನ್ನ ದೇಶ ರಕ್ಷಣೆಗೆ ಗನ್ ಹಿಡಿದಿದ್ದಾರೆ.
ಮಾಡೆಲ್, ಮಾಜಿ ಮಿಸ್ ಗ್ರ್ಯಾಂಡ್ ಆಫ್ ಉಕ್ರೇನ್ ಅನಸ್ತಾಸಿಯಾ ಲೆನ್ನಾ ದೇಶಕ್ಕಾಗಿ ಹೋರಾಡಲು ಸಜ್ಜಾಗಿದ್ದಾರೆ. ಕೈಯಲ್ಲಿ ಗನ್ ಹಿಡಿದು, ಸಮವಸ್ತ್ರ ಧರಿಸಿ ನಿಂತಿರುವ ಫೋಟೋವನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಅನಸ್ತಾಸಿಯಾ 2015ರಲ್ಲಿ ಮಿಸ್ ಗ್ರ್ಯಾಂಡ್ ಇಂಟರ್ನ್ಯಾಷನಲ್ ಬ್ಯೂಟಿ ಸ್ಪರ್ಧೆಯಲ್ಲಿ ಗೆದ್ದಿದ್ದರು. ದೇಶದ ಅಗತ್ಯ ಪರಿಸ್ಥಿತಿಯಲ್ಲಿ ಅವರು ಈಗ ತಮ್ಮ ದೇಶ ರಕ್ಷಣೆ ಮಾಡಲು ಉಕ್ರೇನ್ ಸೈನ್ಯಕ್ಕೆ ಸೇರ್ಪಡೆಗೊಂಡಿದ್ದಾರೆ.
ರಷ್ಯಾ ವಿರುದ್ದ ಹೋರಾಡಲು ಉಕ್ರೇನ್ ನಾಗರಿಕರು ಕೂಡ ಮುಂದಾಗಿದ್ದು, ಶಸ್ತ್ರಾಸ್ತ್ರಗಳನ್ನು ಹಿಡಿದು ರಷ್ಯಾ ಸೇನೆ ಹಿಮ್ಮೆಟ್ಟಿಸಲು ಯತ್ನಿಸುತ್ತಿದ್ದಾರೆ.
