Breaking NewsLatestಮೆಟ್ರೋರಾಜ್ಯರಾಷ್ಟ್ರೀಯವಿದೇಶಸುದ್ದಿ

ಉಕ್ರೇನ್ ನ ಖಾರ್ಕೋವ್ ಮೇಲೆ ರಷ್ಯಾ ಪಡೆ ದಾಳಿ, ಭಯದಲ್ಲಿ ರಾಜ್ಯದ ವಿದ್ಯಾರ್ಥಿಗಳು

ಉಕ್ರೇನ್: ರಷ್ಯಾದ ಸೈನ್ಯವು ನಗರ ಪ್ರವೇಶಿಸಿದೆ ಎಂದು ಉಕ್ರೇನ್ ನಲ್ಲಿರುವ ಖಾರ್ಕೋವ್ ಅಧಿಕಾರಿಗಳು ಘೋಷಿಸಿದ್ದಾರೆ. ರಷ್ಯಾದ ವಿಶೇಷ ಸೇನಾ ಕಾರ್ಯಾಚರಣೆಯ 4ನೇ ದಿನದಂದು ಸೇನೆಯು ನಗರ ಕೇಂದ್ರವನ್ನು ತಲುಪಿದೆ ಎಂದು ಉಕ್ರೇನ್ ನ ಎರಡನೇ ಅತಿದೊಡ್ಡ ನಗರವಾದ ಖಾರ್ಕೋವ್ ನ ಅಧಿಕಾರಿಗಳು ಭಾನುವಾರ ಘೋಷಿಸಿದ್ದಾರೆ. ಎಂದು ಸುದ್ದಿ ಸಂಸ್ಥೆ ಎಎಫ್ ಪಿ ವರದಿ ಮಾಡಿದೆ.

ರಷ್ಯಾದ ಶತ್ರುಗಳ ಲಘೊ ವಾಹನಗಳು ಖಾರ್ಕೋವ್ ನಗರದ ಮೇಲೆ ದಾಳಿ ಮಾಡಿದೆ ಎಂದು ಸ್ಥಳೀಯ ಉಕ್ರೇನಿಯನ್ ಅಧಿಕಾರಿ ಒಲೆಗ್ ಸೆನೆಗುಬೊವ್ ಫೇಸ್ ಬುಕ್ ಗನಲ್ಲಿ ತಿಳಿಸಿದ್ದಾರೆ.

ಉಕ್ರೇನಿಯನ್ ಸಶಸ್ತ್ರ ಪಡೆಗಳು ಶತ್ರುಗಳನ್ನು ನಿರ್ಮೂಲನೆ ಮಾಡುತ್ತಿವೆ, ಅವರು ತಮ್ಮ ಮನೆಗಳನ್ನು ತೊರೆಯದಂತೆ ಸಿವಾಸಿಗಳಿಗೆ ಮನವಿ ಮಾಡಿದರು.

ಖಾರ್ಕೋವ್ ನಲ್ಲಿ ಕರ್ನಾಟಕದ ವಿದ್ಯಾರ್ಥಿಗಳು

ಈ ನಡುವೆ ಖಾರ್ಕೋವ್ ನಗರದಲ್ಲಿ ಕರ್ನಾಟಕದ ವಿದ್ಯಾರ್ಥಿಗಳು ಸಿಲುಕಿದ್ದು, ಅವರನ್ನು ಸುರಕ್ಷಿತವಾಗಿ ಕರೆ ತರುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿದೇಶಾಂಗ ಸಚಿವ ಡಾ.ಎಸ್.ಜೈರಾಜ್ ಅವರನ್ನು ಭಾನುವಾರ ಮನವಿ ಮಾಡಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button