ಮನರಂಜನೆಸಿನಿಮಾಸೆಲೆಬ್ರಿಟಿ
ಕೆಂಪು ಸೀರೆಯಲ್ಲಿ ಮಗಧೀರನ ಬೆಡಗಿಯ ಬೇಬಿ ಬಂಪ್ ಫೋಟೋ ಶೂಟ್

ಮಗಧೀರನ ಬೆಡಗಿ ನಟಿ ಕಾಜಲ್ ತಾಯಿಯಾಗುತ್ತಿದ್ದು ಇದೀಗ ಬೇಬಿ ಬಂಪ್ ಫೋಟೋಗಳನ್ನ ಹಂಚಿಕೊಂಡಿದ್ದಾರೆ. ಕೆಂಪು ಸೀರೆಯುಟ್ಟು ನಟಿ ಕಾಜಲ್ ಕ್ಯಾಮರಾಗೆ ಫೋಸ್ ನೀಡಿದ್ದಾರೆ.

ಕಾಜಲ್ ಅಗರ್ವಾಲ್ ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಮದುವೆ ಆಗಿದ್ದರು. ಬಾಯ್ಫ್ರೆಂಡ್ ಗೌತಮ್ ಕಿಚಲು ಅವರನ್ನು ವಿವಾಹವಾಗುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದರು.

ಇತ್ತೀಚೆಗಷ್ಟೇ ಕಾಜಲ್ ಹಾಗೂ ಗೌತಮ್ ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು. ಈ ಜೋಡಿಗಳಗೆ ಸಾಕಷ್ಟು ಮಂದಿ ಅಭಿಮಾನಿಗಳು ಶುಭ ಹಾರೈಸಿದ್ದರು.

ಕೆಂಪು ಸೀರೆಯುಟ್ಟ ಕಾಜಲ್ ಬೇಬಿ ಬಂಪ್ ಫೋಟೋ ನೋಡಿ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಫೋಟೋ ನೋಡಿದ ನೆಟ್ಟಿಗರು ನೋಡಲು ತುಂಬಾ ಚೆನ್ನಾಗಿ ಕಾಣುತ್ತಿದ್ದೀರಿ ಎಂದು ಕಾಮೆಂಟ್ ಮಾಡಿದ್ದಾರೆ.





