Breaking NewsLatestಜಿಲ್ಲಾ ಸುದ್ದಿದಾವಣಗೆರೆ

ಪಕ್ಷೇತರ ಅಭ್ಯರ್ಥಿಗೆ ಒಲಿದ ದಾವಣಗೆರೆ ಮೇಯರ್ ಪಟ್ಟ…!

ದಾವಣಗೆರೆ: ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಪಕ್ಷೇತರ ಸದಸ್ಯೆ ಗಾಯತ್ರಿ ಗೋಪಿನಾಯ್ಕ್ ಆಯ್ಕೆಯಾಗಿದ್ದಾರೆ. ಉಪಮೇಯರ್ ಪಟ್ಟ ಗಾಯತ್ರಿ ಖಂಡೋಜಿರಾವ್ ಅವರಿಗೆ ಒಲಿದು ಬಂದಿದೆ.

ಪಾಲಿಕೆಯ ಸದಸ್ಯರು, ಪಕ್ಷೇತರ ಸದಸ್ಯರು, ವಿಧಾನ ಪರಿಷತ್ ಸದಸ್ಯರು, ಸಂಸದರು, ಶಾಸಕರು ಸೇರಿ ಬಿಜೆಪಿ 29 ಮತ ಹೊಂದಿದ್ದರೆ, ಕಾಂಗ್ರೆಸ್ 25 ಸ್ಥಾನ ಹೊಂದಿತ್ತು. ಜೆಡಿಎಸ್ ನ ಸದಸ್ಯೆ ಗೈರಾಗಿದ್ದರು. ಈ ಹಿನ್ನೆಲೆಯಲ್ಲಿ ಜಯಮ್ಮ ಗೋಪಿನಾಯ್ಕ್ ಸುಲಭವಾಗಿ ಜಯ ಗಳಿಸಿದರು.

ಈ ಬಾರಿಯ ಮೇಯರ್ ಸ್ಥಾನ ಎಸ್ಸಿ ಮಹಿಳೆಗೆ ಮೀಸಲಾಗಿತ್ತು. ಈ ಸ್ಥಾನಕ್ಕೆ ಬಿಜೆಪಿಯಿಂದ ಶಿಲ್ಪಾ ಜಯಪ್ರಕಾಶ್ ಹಾಗೂ ಜಯಮ್ಮ ಗೋಪಿನಾಯ್ಕ್ ಹೆಸರು ಕೇಳಿ ಬಂದಿತ್ತು. ಕೊನೆ ಕ್ಷಣದವರೆಗೂ ಶಿಲ್ಪಾ ಜಯಪ್ರಕಾಶ್ ಅವರೇ ಆಯ್ಕೆಯಾಗುತ್ತಾರೆ ಎಂಬ ಮಾತು ಕೇಳಿ ಬರುತಿತ್ತು. ಕಾಂಗ್ರೆಸ್ ನವರು ಏನಾದರೂ ಮಾಡಿ ಅಧಿಕಾರ ಹಿಡಿಯುತ್ತಾರೆ ಎಂಬುದು ಹುಸಿಯಾಗಿದೆ.

ಬಿಜೆಪಿಯ ಕೆಲ ಪಾಲಿಕೆಯ ಸದಸ್ಯರು ಶಿಲ್ಪಾ ಜಯಪ್ರಕಾಶ್ ಅವರಿಗೆ ಮೇಯರ್ ಪಟ್ಟ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಇದರ ಪ್ರಯೋಜನ ಪಡೆಯಲು ಕಾಂಗ್ರೆಸ್ ಸಹ ಪ್ರಯತ್ನ ಮಾಡಿತ್ತು. ಸಂಸದ ಜಿ. ಎಂ. ಸಿದ್ದೇಶ್ವರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತಂತ್ರ ಬದಲಿಸಿದ ಪರಿಣಾಮ ಜಯಮ್ಮ ಗೋಪಿನಾಯ್ಕ್ ಅವರಿಗೆ ಮೇಯರ್ ಪಟ್ಟ ಒಲಿದು ಬಂದಿದೆ. ಮೊದಲ ಬಾರಿಗೆ ಕಾರ್ಪೊರೇಟರ್ ಆಗಿದ್ದ ಜಯಮ್ಮ ಅವರು ಈ ಹುದ್ದೆ ಅಲಂಕರಿಸುತ್ತಿದ್ದಾರೆ.

ದಾವಣಗೆರೆ ಮಹಾನಗರ ಪಾಲಿಕೆ ಮೇಯರ್ ಪಟ್ಟ ಪಕ್ಷೇತರ ಅಭ್ಯರ್ಥಿಗೆ ಒಲಿದಿದೆ. ಕೊನೆ ಕ್ಷಣದಲ್ಲಿ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಜಯಮ್ಮ ಗೋಪಿನಾಥ್ ಮೇಯರ್ ಆಗಿ ಆಯ್ಕೆಯಾದರೆ, ಉಪಮೇಯರ್ ಪಟ್ಟ ಗಾಯತ್ರಿ ಖಂಡೋಜಿರಾವ್ ಗೆ ದಕ್ಕಿದೆ‌.

ಇನ್ನು ಬಿ. ಜೆ. ಅಜಯ್ ಕುಮಾರ್, ಎಸ್. ಟಿ. ವೀರೇಶ್ ಅವರು ಸಹ ಮೊದಲ ಬಾರಿ ಪಾಲಿಕೆ ಚುನಾವಣೆಯಲ್ಲಿ ಗೆದ್ದಿದ್ದರು. ಮೊದಲಿಗೆ ಅಜಯ್ ಕುಮಾರ್ ಮೇಯರ್ ಆಗಿದ್ದರೆ, ಕಳೆದ ವರ್ಷ ಎಸ್. ಟಿ. ವೀರೇಶ್ ಮಹಾಪೌರರಾಗಿ ಆಡಳಿತ ನಡೆಸಿದ್ದರು. ಇಂದು ಜಯಮ್ಮ ಅವರಿಗೆ ಅದೃಷ್ಟ ಒಲಿದು ಬಂದಿದೆ. ಈ ಮೂಲಕ ಮೂರನೇ ಬಾರಿಯೂ ಹೊಸಬರೇ ಅಧಿಕಾರ ಗದ್ದುಗೆ ಏರಿದ್ದು ವಿಶೇಷ.

Spread the love

Related Articles

Leave a Reply

Your email address will not be published. Required fields are marked *

Back to top button